ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಮಲ್ಲಿಕಾರ್ಜುನ ಟೈಲ್ಸ್ ಮತ್ತು ಸೆರಾಮಿಕ್ಸ್‌ನ ಮಾಲೀಕರಾದ ಮುದ್ದಣ್ಣ ಹಲುಂಡಿ ಅವರ ಮೇಲೆ ಗ್ರಾನೈಟ್ ಕಲ್ಲು ಬಿದ್ದು ಸ್ಥಳದಲ್ಲಿಯೇ ಮೃತರಾಗಿದ್ದಾರೆ.

ಮುದ್ದಣ್ಣ ಹಲುಂಡಿ (53)ಮೃತರು ಉಪ್ಪಾರ ಸಮುದಾಯದ ಪ್ರಮುಖರಾಗಿದ್ದರು. ಅವರು ಕೊಪ್ಪಳ ಜಿಲ್ಲೆಯವರಾಗಿದ್ದು, ಕಾರವಾರದ ಬಾಂಡಿಶೆಟ್ಟಾದಲ್ಲಿ ವಾಸವಿದ್ದರು. ಅಸ್ನೋಟಿಯ ಕಚ್ಚೆಳ್ಳಿ ಗ್ರಾಮದ ಬಳಿ ಅವರು ಗ್ರಾನೈಟ್ ಕಲ್ಲು ಸಂಗ್ರಹಿಸಿದ್ದರು. ಗುರುವಾರದಂದು ಗ್ರಾಹಕರು ಅವರ ಅಂಗಡಿಗೆ ಬಂದು ಗ್ರಾನೈಟ್ ಮತ್ತು ಟೈಲ್ಸ್‌ಗಳನ್ನು ವೀಕ್ಷಿಸುತ್ತಿದ್ದರು.

ಗ್ರಾಹಕರು ಆಯ್ದುಕೊಂಡಿದ್ದ ಕಡಪ ಕಲ್ಲುಗಳನ್ನು ರಿಕ್ಷಾದಲ್ಲಿ ತುಂಬುವ ಕೆಲಸದಲ್ಲಿ ಮುದ್ದಣ್ಣ ತಮ್ಮ ಕಾರ್ಮಿಕ ಪ್ರಕಾಶ್ ಬಂಡೇಕರ್ ಜೊತೆಗೆ ನಿರತರಾಗಿದ್ದರು. ಸುಮಾರು 6 ಅಡಿ ಉದ್ದದ ಗ್ರಾನೈಟ್ ಕಲ್ಲಿಗೆ ರಶ್ಮಿ ಕಟ್ಟಿ ಬಿಗಿಯುವಾಗ ಅದು ನೆಲಕ್ಕೆ ಬಿದಿದ್ದೆ. ಈ ವೇಳೆ ರಿಕ್ಷಾದೊಳಗೆ ಕಡಪ ಕಲ್ಲುಗಳನ್ನು ಸರಿಯಾಗಿ ಹಾಕುತ್ತಿದ್ದಾಗ ಏಕಕಾಲಕ್ಕೆ 7ಕ್ಕೂ ಹೆಚ್ಚು ಕಡಪ ಕಲ್ಲುಗಳು ಮುದ್ದಣ್ಣ ಅವರ ಮೇಲೆ ಬಿದ್ದಿದೆ..

ಕಲ್ಲು ಕೆಳಗೆ ಬಿದ್ದ ಮುದ್ದಣ್ಣ ಹಲುಂಡಿ ಅವರು ಸ್ಥಳದಲ್ಲಿದ್ದವರು ತಕ್ಷಣವೇ ಹೊರತೆಗೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅವರ ಮೇಲೆ ಬಿದ್ದ ಗ್ರಾನೈಟ್ ಕಲ್ಲಿನಿಂದ ತೀವ್ರ ಗಾಯವಾಗಿ ಅವರು ಸ್ಥಳದಲ್ಲಿಯೇ ಮೃತಪಟ್ಟಿರುವ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ.

ಇದನ್ನೂ ಓದಿ