ಸುದ್ದಿಬಿಂದು ಬ್ಯೂರೋ ವರದಿ
ಅಹಮದಾಬಾದ್ : ಅವರೇಲ್ಲಾ ಖುಷಿ ಖುಷಿಯಾಗಿ ಗುಜರಾತ್‌ನ ಅಹಮದಾಬಾದ್ ವಿಮಾನ್ ನಿಲ್ದಾಣ ಮೂಲಕ ಲಂಡನ್‌ಗೆ ಹೊರಲು ಏರ್ ಇಂಡಿಯಾ ವಿಮಾನವನ್ನ ಏರಿದ್ರು. ಆದರೆ ವಿಮಾನ ಏರಿದ 242 ಪ್ರಮಾಣಿಕರ ಪೈಕಿ ,241 ಪ್ರಯಾಣಿಕರ ಅದೃಷ್ಟ ಕೈಕೊಟ್ಟಿದೆ.
ಐದು ನಿಮೀಷದಲ್ಲಿ ವಿಮಾನದಲ್ಲಿದ್ದ ,242 ಪ್ರಯಾಣಿಕರ ಪೈಕಿ 241 ಪ್ರಯಾಣಿಕರು ದುರಂತಕ್ಕೆ ಒಳಗಾದ ವಿಮಾನದಲ್ಲಿ ಸಜೀವದಹನವಾಗಿರುವುದು ಮಾತ್ರ ದುರಂತ.ಈ ಎಲ್ಲಾ ಪ್ರಯಾಣಿಕರ ಪೈಕಿ ಭಾರತ ಮೂಲದ ರಮೇಶ ಎಂಬಾತ ವಿಮಾನ ಪತನಗೊಳ್ಳುವ ಕೊನೆ ಕ್ಷಣದಲ್ಲಿ ವಿಮಾನದಿಂದ ಹೊರಕ್ಕೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾನೆ. ಘಟನೆಯಲ್ಲಿ ಅದೆಷ್ಟೋ ಪುಟ್ಟಮಕ್ಕಳು ಸೇರಿದಂತೆ ಹಲವರು ಸಜೀವ ದಹನವಾಗಿದ್ದಾರೆ..ಈ ವಿಮಾನದೊಳಗೆ ವ್ಯವಸ್ಥೆಗಳು ಸರಿಯಾಗಿಲ್ಲ ಎನ್ನುವ ಬಗ್ಗೆ ಪ್ರಯಾಣಿಕನೋರ್ವ ವಿಡಿಯೋ ಮಾಡಿ ವೈರಲ್ ಮಾಡಿದ್ದ,ಕೆಲವೇ ಕ್ಷಣದಲ್ಲಿ ಈ ವಿಮಾನ ದುರಂತಕ್ಕೆ ಒಳಗಾಗಿದೆ.
ದುರಂತದಲ್ಲಿ ಬಹುತೇಕ ಅನೇಕರು ಮಂದಿಯಲ್ಲಿ ಒಂದೊಂದೆ ಕುಟುಂಬಕ್ಕೆ ಸೇರಿದವರೆ ಹೆಚ್ಚಿನ ಸಂಖ್ಯೆಯಲ್ಲಿದ್ದರು ಎನ್ನುವುದು ಘಟನೆ ಬಳಿಕ ಗೊತ್ತಾಗತ್ತಿದೆ. ಘಟನೆಯಲ್ಲಿ ಗುಜರಾತ್ ಮಾಜಿ ಸಿಎಂ ಲಂಡನ್‌ನಲ್ಲಿರುವ ಮಗಳನ್ನ ನೋಡೋದಕ್ಕೆ ಅಂತಾ ಅಹಮದಾಬಾದ್ ನಿಂದ ಪ್ರಯಾಣ ಬೆಳಸಿದ್ದು, ದುರಂತ ಘಟನೆಯಲ್ಲಿ ಪ್ರಾಣ ಕಳೆದುಕೊಳ್ಳುವಂತಾಗಿದೆ.ಅಹಮದಾಬಾದ್ ವಿಮಾನ ದುರಂತ ದೇಶದಲ್ಲೇ ಅತೀ ದೊಡ್ಡ ದುರಂತ ಎನ್ನಲಾಗತ್ತಿದೆ.
ಇದನ್ನೂ ಓದಿ