ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ : ಬಹುತೇಕ ರಾಜಕೀಯ ನಾಯಕರು ತಾವು ನೀಡಿದ ಭರವಸೆಯನ್ನ ಚುನಾವಣೆ ಬಳಿಕ ಮರೆತು ಬಿಡುವುದು ಸಾಮಾನ್ಯ ಎನ್ನುವುದು ಪ್ರತಿಯೊಬ್ಬರು ಆಡಿಕೊಳ್ಳತ್ತಾರೆ. ಆದರೆ ಭಟ್ಕಳ ಕ್ಷೇತ್ರದ ಹಾಲಿ ಶಾಸಕ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಜನತೆಗೆ ಕೊಟ್ಟ ಮಾತನ್ನ ಉಳಿಸಿಕೊಳ್ಳು ಮುಂದಾಗಿರುವುದಕ್ಕೆ ವ್ಯಾಪಕ ಜನ ಬೆಂಬಲ ವ್ಯಕ್ತವಾಗತ್ತಾ ಇದೆ.
ಕಳೆದ 2022ರಲ್ಲಿ ಹೊನ್ನಾವರದಿಂದ ಕುಂದಾಪುರಕ್ಕೆ ರೋಗಿ ಓರ್ವನಿಗೆ ಅಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಅಲ್ಲಿ ಟೋಲ್ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ರೋಗಿ ಸಾಗಿಸುತ್ತಿದ್ದ ಅಂಬುಲೆನ್ಸ್ ಟೋಲ್‌ಗೇಟ್‌ಗೆ ಡಿಕ್ಕಿ ಹೊಡೆದು ರೋಗಿ ಸೇರಿ ನಾಲ್ವರು ಸಾವನ್ನಪ್ಪಿದ್ದರು. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಜಿಲ್ಲೆಯಲ್ಲಿ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಇರದ ಕಾರಣಕ್ಕೆ ಜಿಲ್ಲೆಯ ಜನರಿಗೆ ಸರಿಯಾದ ಚಿಕತ್ಸೆ ನೀಡೋದಕ್ಕೆ ಉತ್ತರಕನ್ನಡದಲ್ಲಿ ಸರಿಯಾದ ಒಂದೇ ಒಂದು ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಇಲ್ಲ ಎನ್ನುವ ಕೂಗು ವ್ಯಾಪಕವಾಗಿ ಕೇಳಿ ಬಂದಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡಮಟ್ಟದಲ್ಲಿ ಅಭಿಯಾನ ಕೂಡ ನಡೆಸಲಾಗಿತ್ತು.
ಇದಾದ ಬಳಿಕ ಅಂದು ಅಧಿಕಾರದಲ್ಲಿ ಇದ್ದ ಸರಕಾರದ ಪ್ರತಿನಿಧಿಗಳು ಜಿಲ್ಲೆಗೆ ಭೇಟಿ ನೀಡಿ ಕ್ಷಣಾರ್ಧದಲ್ಲಿ ಜಿಲ್ಲೆಯಲ್ಲಿ ಒಂದು ಮಲ್ಟಿ ಆಸ್ಪತ್ರೆ ನಿರ್ಮಾಣಯೇ ಸಿದ್ದ ಎಂದು ಜಿಲ್ಲೆಯ ಜನರನ್ನ ಮರಳು ಮಾಡಿ ಹೋಗಿದ್ದರು. ಅಂದು ಎಲ್ಲರೂ ಕೂಡ ಇನ್ನೇನು ಆಸ್ಪತ್ರೆ ಆಗಿಯೇ ಹೋಯತ್ತು ಎನ್ನುವ ಹಂತಕ್ಕೆ ಬಂದು ನಿಂತಿದ್ದರು. ಆದರೆ ಅವೇಲ್ಲವೂ ಕೇವಲ ಚುನಾವಣೆ ಗಿಮಿಕ್ ಅನ್ನೋಂದು ನಿಧಾನವಾಗಿ ಎಲ್ಲರಿಗೂ ಅರ್ಥವಾಯತ್ತು…ಸರಕಾರದ ಬದಲಾದ ನಂತರದಲ್ಲಿ ಹಿಂದಿನ ಸರಕಾರದಲ್ಲಿ ಹೇಳಿದವರೆಲ್ಲಾ ಸುಮ್ಮನಾಗ ಬಿಟ್ಟರು..
ಆದರೆ ಹಾಲಿ ಸಚಿವ ಮಂಕಾಳ್ ವೈದ್ಯ ಅವರು ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣದ ವಿಚಾರವಾಗಿ ಅಂದು ಮಾತ್ರ ಕೊಟ್ಟ ಮಾತನ್ನ ತಪ್ಪದೆ ಪಾಲಿಸಲು ಮುಂದಾಗಿದ್ದಾರೆ. ಅಂದು ,2022 ಜುಲೈ 21ರಂದು ಶಿರೂರು ಟೋಲ್ ಗೇಟ್ ಬಳಿ ಅಂಬುಲೆನ್ಸ್ ಅಪಘಾತದಲ್ಲಿ ಮೃತಪಟ್ಟವರ ಮನೆಗೆ ಮಂಕಾಳ್ ವೈದ್ಯ ಅವರು ಭೇಟಿ ನೀಡಿದ್ದ ವೇಳೆ ಮೃತರ ಕುಟುಂಬಸ್ಥರು ಕಣ್ಣೀರು ಹಾಕಿ ನಮ್ಮಲ್ಲೇ ಒಂದು ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಇದ್ದಿದ್ದರೆ ನಮ್ಮ ಕುಟುಂಬ ಇಂದು ಇಂತಹ ದುರಂತಕ್ಕೆ ಒಳಗಾಗತ್ತಾ ಇರಲಿಲ್ಲ ಎಂದು ಕಣ್ಣೀರು ಹಾಕಿದ್ದರು.ಆದರೆ ಅಂದು ಮಂಕಾಳ್ ವೈದ್ಯ ಅವರು ಒಂದು ಮಾತುಕೊಟ್ಟಿದ್ದರು..ಸರಕಾರ ಈ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಮಾಡದೆ ಹೋದರೆ ಬಡ ಜನತೆಗಾಗಿ ಸ್ವಂತ ಖರ್ಚಿನಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಮಾಡೋದಾಗಿ ಭರವಸೆ ನೀಡಿದ್ರು.
ಮಂಕಾಳ್ ವೈದ್ಯ ಅವರು ಸಚಿವರಾಗಿದ್ದಾರೆ ಆದರೆ.ಅಂದು ಕೊಟ್ಟ ಮಾತನ್ನ ಇಂದು ಉಳಿಸಿಕೊಳ್ಳುತ್ತಿದ್ದಾರೆ. ತಮ್ಮ ಸ್ವಂತ ಖರ್ಚಿನಲ್ಲಿ ಸರಿಸುಮಾರು ಮೂವತ್ತು ಏಕರೆ ಜಾಗದಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದು, ಅದಕ್ಕೆ ಅತೀ ಶೀಘ್ರದಲ್ಲಿ ಚಾಲನೆ ಸಿಗಲಿದೆ ಎನ್ನಲಾಗಿದೆ.
ಇದನ್ನೂ ಓದಿ