ಸುದ್ದಿಬಿಂದು ಬ್ಯೂರೋ ವರದಿ
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದ್ದು, ಭಾರತೀಯ ಕ್ಷಿಪಣಿಗಳ ದಾಳಿಯಿಂದ ಪಾಕಿಸ್ತಾನದ ಪ್ರಮುಖ ನಗರಗಳು ಹಾನಿಗೊಳ್ಳುತ್ತಿವೆ. ಕರಾಚಿ, ರಾಜಧಾನಿ ಇಸ್ಲಾಮಾಬಾದ್, ಲಾಹೋರ್ ಮತ್ತು ರಾವಲ್ಪಿಂಡಿ ಸೇರಿದಂತೆ ಹಲವು ನಗರಗಳು ಭಾರತ ನಡೆಸಿದ ಭಾರೀ ದಾಳಿಯಿಂದ ಹಾನಿಗೊಂಡಿವೆ.
ಕರಾಚಿ ಬಂದರಿನಲ್ಲಿ 10ಕ್ಕೂ ಹೆಚ್ಚು ಸ್ಫೋಟಗಳು ನಡೆದಿದ್ದು, ಬಂದರು ಪ್ರದೇಶ ಸಂಪೂರ್ಣವಾಗಿ ನಾಶವಾಗಿದೆ. INS ವಿಕ್ರಾಂತ್‌ನ ನೇತೃತ್ವದಲ್ಲಿ ಭಾರತೀಯ ನೌಕಾಪಡೆಯು ಈ ದಾಳಿಯನ್ನು ನಡೆಸಿದ್ದು, ಬಂದರಿನಾದ್ಯಂತ ಬೆಂಕಿ ಕಾಣಿಸಿಕೊಂಡಿದೆ. ಕರಾಚಿ ಬಂದರು ಸಂಪೂರ್ಣ ನಾಶವಾಗಿದೆಯೆಂದು ಮೂಲಗಳು ತಿಳಿಸಿವೆ.
ಇದರ ಹಿಂದೆ, ಪಾಕಿಸ್ತಾನವು ಜಮ್ಮು, ಪಠಾಣ್‌ಕೋಟ್ ಮತ್ತು ಉದಂಪುರ್‌ನಲ್ಲಿನ ಭಾರತೀಯ ಸೈನಿಕ ತಾಣಗಳ ಮೇಲೆ ಡ್ರೋನ್ ಹಾಗೂ ಕ್ಷಿಪಣಿಗಳ ಮೂಲಕ ದಾಳಿ ನಡೆಸಲು ವಿಫಲ ಪ್ರಯತ್ನ ಮಾಡಿತ್ತು. ಇದಕ್ಕೆ ತಕ್ಕ ಪ್ರತಿಯಾಗಿ ಭಾರತ ಪ್ರತಿದಾಳಿ ನಡೆಸಿದ್ದು, ಪಾಕಿಸ್ತಾನದ ಹಲವು ಪ್ರಮುಖ ನಗರಗಳು ಗಂಭೀರವಾಗಿ ಹಾನಿಗೊಂಡಿವೆ.
ಭಾರತೀಯ ಸೇನೆ ಪಾಕಿಸ್ತಾನದ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಯಶಸ್ವಿಯಾಗಿ ಧ್ವಂಸಮಾಡಿದೆ. “ಪಾಕಿಸ್ತಾನದ ಪ್ರತಿಯೊಂದು ಪ್ರಯತ್ನವನ್ನೂ ತಡೆದಿದ್ದೇವೆ. ಭಾರತದ ಪ್ರಭುತ್ವ ಮತ್ತು ಪ್ರಜೆಗಳ ಭದ್ರತೆಯಿಗಾಗಿ ನಾವು ಸಂಪೂರ್ಣ ಸಿದ್ಧರಾಗಿದ್ದೇವೆ,” ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ
- ಭೀಕರ ರಸ್ತೆ ಅಪಘಾತ : ಗಂಟೆಗಟ್ಟಲೆ ಟ್ರಕ್ನಲ್ಲಿ ಸಿಲುಕಿಕೊಂಡಿದ್ದ ಚಾಲಕ
- ಕುಮಟಾ ತಾಲೂಕ ಪಂಚಾಯತ್ ಅಧಿಕಾರಿಗಳ ಕರ್ತವ್ಯ ಲೋಪ ಅಧಿಕಾರ ದುರುಪಯೋಗದ ವಿರುದ್ಧ ಗಜಾನನ ಹಳ್ಳೆರ ತೀವ್ರ ಆಕ್ರೋಶ
- DK ಶಿವಕುಮಾರ್ ಕೂಡ ಮುಖ್ಯಮಂತ್ರಿ ಆಗಬೇಕು ಪ್ರಣವಾನಂದ ಸ್ವಾಮೀಜಿ ಹೇಳಿಕೆ
- ’45’ ಚಿತ್ರದ ‘AFRO ಟಪಾಂಗ್’ ಹಾಡಿಗೆ ಜಾಗತಿಕ ಹವಾ: 28.5 ಮಿಲಿಯನ್ ವೀಕ್ಷಣೆ ಮತ್ತು ಭಾರತದಲ್ಲಿ ಟ್ರೆಂಡಿಂಗ್ ಟಾಪ್!


