ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ : ಇಲ್ಲಿನ ಚಂದಾವರ ವ್ಯಾಪ್ತಿಯ ಹೊದ್ಕೆಶಿರೂರು,ಕಡ್ನೀರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ, ರೈತನ ಮಗಳು ರಮ್ಯಾ ಗಿರೀಶ ನಾಯ್ಕ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.98.72ಅಂಕ ಪಡೆದು ರಾಜ್ಯ ಸೂಚ್ಯಂಕ ಪಟ್ಟಿಯಲ್ಲಿ ರಾಜ್ಯಕ್ಕೆ 9ನೇ ಸ್ಥಾನ ಪಡೆಯುವ ಮೂಲಕ ಶಾಲೆಯ ಎಲ್ಲಾ ದಾಖಲೆಗಳನ್ನು ಮುರಿದು ವಿಶೇಷ ಸಾಧನೆ ಮಾಡಿ ಕೀರ್ತಿ ತಂದಿದ್ದಾಳೆ.
ನಿತ್ಯ ಕಡ್ನೀರಿನಿಂದ ಹೊದ್ಕೆ ಪ್ರೌಢ ಶಾಲೆಗೆ ಕ್ರಮಿಸಿಯೂ ಈ ಮಹತ್ತರ ಸಾಧನೆ ಮಾಡಿದ್ದಾಳೆ.ಓದಿನಲ್ಲಿ ಸದಾ ಮುಂದೆ ಇದ್ದ ಅಪ್ಪಟ ಗ್ರಾಮೀಣ ಪ್ರತಿಭೆ ರಮ್ಯಾಳಿಗೆ ಶಿಕ್ಷಕರ ಬೋಧನೆ, ತಂದೆ-ತಾಯಿ ಮಾರ್ಗದರ್ಶನ ಹಾಗು ನಿರಂತರ ಚಟುವಟಿಕೆಯೇ ವಿದ್ಯಾರ್ಥಿನಿಗೆ ಶಾಲೆಗೆ ಮೊದಲ ಸ್ಥಾನ ತಂದುಕೊಡಲು ಸ್ಪೂತಿದಾಯಕವಾಗಿದೆ. ರಮ್ಯಾ ಕಡ್ನೀರಿನ ಶಶಿಕಲಾ ಹಾಗು ಗಿರೀಶ ಕೇಶವ ನಾಯ್ಕ ದಂಪತಿ ಪುತ್ರಿ.ಮೂಲತಃ ರೈತ ಕುಟುಂಬವಾದರೂ, ತಂದೆ ಗಿರೀಶ ಕೃಷಿ ಚಟುವಟಿಕೆ ಮೇಲಿನ ಆಸಕ್ತಿಯಿಂದಾಗಿ ಅಪ್ಪಟ ರೈತರಾಗಿದ್ದಾರೆ. ತಾಯಿ ಶಶಿಕಲಾ ಗೃಹೀಣಿಯಾಗಿದ್ದು,ಪತಿಯ ಕೃಷಿ ಕಾರ್ಯಕ್ಕೂ ಸಾಥ್ ನೀಡುತ್ತಿದ್ದಾರೆ. ರಮ್ಯಾ ಫಲಿತಾಂಶ ಹೊರಬೀಳುತ್ತಿದ್ದಂತೆ ಈಕೆಯ ಸಾಧನೆಯನ್ನು ಮೆಚ್ಚಿ ಪಾಲಕರು, ಪೋಷಕರು ಸಿಹಿ ತಿನಿಸಿ ಸಂಭ್ರಮಪಟ್ಟರು. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ರಮ್ಯಾಳ ಈ ವಿಶೇಷ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ, ಪಾಲಕರು, ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನನ್ನ ಈ ಸಾಧನೆ :ಶಿಕ್ಷಕರ ಶ್ರಮ ಸಾಕಷ್ಟಿದೆ
ನನ್ನ ಈ ಸಾಧನೆ ಹಿಂದೆ ನನ್ನ ಶಿಕ್ಷಕರ ಶ್ರಮ ಸಾಕಷ್ಟಿದೆ. ಸತತ ಪರಿಶ್ರಮ, ತಂದೆ-ತಾಯಿಯರ ಮಾರ್ಗದರ್ಶನ, ನಿರಂತರ ಓದಿನಿಂದ ಎಂತಹ ಸಾಧನೆಯೂ ಸಾಧ್ಯವಿದೆ. ಸತತ ಪರಿಶ್ರಮದಿಂದ ರಾಜ್ಯಕ್ಕೆ ೯ನೇ ಸ್ಥಾನ ಮತ್ತು ಶಾಲೆಗೆ ಮೊದಲ ಸ್ಥಾನ ಸಿಕ್ಕಿದೆ. ಕಲಿಕೆಗೆ ಉತ್ತೇಜನ ನೀಡಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ”-ರಮ್ಯಾ ಗಿರೀಶ ನಾಯ್ಕ,ಕಡ್ನೀರು..
ಇದನ್ನೂ ಓದಿ
- ಬ್ರೇಕ್ಫಾಸ್ಟ್ ಟೇಬಲ್ ಮೇಲೆ ಸಿಎಂ ನಿರ್ಧಾರ..? ಕುತೂಹಲ ಮೂಡಿಸಿರುವ ನಾಳೆಯ ಸಿದ್ಧು–ಡಿಕೆ ಮಾತುಕತೆ
- ಬಿಸಿಯೂಟ ಸೇವಿಸಿದ 22 ವಿದ್ಯಾರ್ಥಿಗಳು ಅಸ್ವಸ್ಥ
- ಮಠವು ಪರಂಪರೆ ಹಾಗೂ ಆಧುನಿಕತೆಯ ಜೊತೆ ಸೇತುವೆಯಾಗುವ ಪ್ರಮುಖ ಭೂಮಿಯಕೆಯಾಗಲಿ: ನರೇಂದ್ರ ಮೋದಿ
- ಕಾಲ ಬಳಿ ಹೆಡೆ ಎತ್ತಿದ ಕಿಂಗ್ ಕೋಬ್ರಾ! ಕ್ಷಣಾರ್ಧದಲ್ಲಿ ಬುದ್ಧಿವಂತಿಕೆಯಿಂದ ಪತ್ನಿಯನ್ನ ಉಳಿಸಿದ ಪತಿ : ಮಿರ್ಜಾನದಲ್ಲೊಂದು ಅಚ್ಚರಿಯ ಘಟನೆ


