Gold Price Today : ಅಕ್ಷಯ ತೃತೀಯ ಹಬ್ಬದ ನಂತರ ಭಾರತೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ತೀವ್ರವಾಗಿ ಇಳಿಕೆ ಕಂಡಿದೆ. ಬಂಗಾರವಷ್ಟೇ ಅಲ್ಲ, ಬೆಳ್ಳಿಯ ದರವೂ ಇಳಿಕೆಯಾಗಿದೆ. ಈ ಮೂಲಕ ಬಂಗಾರ ಮತ್ತು ಬೆಳ್ಳಿ ದರ ಎರಡನೇ ದಿನವೂ ಇಳಿಕೆಯಾಗಿದೆ. ಹಾಗಾದರೆ, ಮೇ 01ರಂದು 24 ಕ್ಯಾರೆಟ್ ಬಂಗಾರದ ದರ ಎಷ್ಟು? ಪ್ರತಿ ಕೆ.ಜಿ ಬೆಳ್ಳಿಯ ದರ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ.

ದೇಶೀಯ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ಏರಿಕೆಯಾಗಿದ್ದ ಬಂಗಾರದ ಬೆಲೆ, ಎರಡನೇ ದಿನವೂ ಇಳಿಕೆಯಾಗಿದೆ. ವಿಶೇಷವಾಗಿ ಅಕ್ಷಯ ತೃತೀಯ ಹಬ್ಬದ ದಿನದಂದು ದಾಖಲೆ ಪ್ರಮಾಣದಲ್ಲಿ ಬಂಗಾರ ಹಾಗೂ ಬೆಳ್ಳಿ ಖರೀದಿಯ ನಂತರ, ಈಗ ಈ ಅಮೂಲ್ಯ ಲೋಹಗಳ ಬೆಲೆ ಇಳಿಕೆ ಕಂಡಿದೆ. ಬಂಗಾರ ಮತ್ತು ಬೆಳ್ಳಿಯ ದರದಲ್ಲಿ ತೀವ್ರ ಇಳಿಕೆಯು ಆಭರಣ ಪ್ರಿಯರಿಗೆ ಸಂತೋಷ ನೀಡಿದೆ.

ದೆಹಲಿ ಮಾರುಕಟ್ಟೆಯಲ್ಲಿ ಬುಧವಾರ 10 ಗ್ರಾಂ ಬಂಗಾರದ ಬೆಲೆ ರೂ. 98,040 ಆಗಿತ್ತು. ಈಗ ಬೆಲೆ ಇನ್ನಷ್ಟು ಇಳಿದುದೆ, ಭಾರತದಲ್ಲಿನ ವಿವಿಧ ನಗರಗಳಲ್ಲಿ ದರ ಎಷ್ಟು ಇದೆ? ಎನ್ನುವ ವಿವರ

ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ಬಂಗಾರದ ಬೆಲೆ ಪ್ರತಿ 10 ಗ್ರಾಂಗೆ ರೂ. 2,000 ಇಳಿದು ರೂ. 87,900 ಕ್ಕೆ ತಲುಪಿದೆ. 24 ಕ್ಯಾರೆಟ್ ಬಂಗಾರದ ದರ ಪ್ರತಿ 10 ಗ್ರಾಂಗೆ ರೂ. 2,160 ಇಳಿದು ರೂ. 95,880 ಆಗಿದೆ. ಬೆಳ್ಳಿಯ ದರ ಪ್ರತಿ ಕೆ.ಜಿ ಗೆ ರೂ. 2,000 ಇಳಿದು ರೂ. 98,000 ಆಗಿದೆ. ಬೆಂಗಳೂರು ನಗರದಲ್ಲೂ ಬೆಳ್ಳಿಯ ದರ ರೂ. 2,400 ಇಳಿಕೆಯಾಗಿದೆ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಬಂಗಾರದ ಬೆಲೆ (ಪ್ರತಿ 10 ಗ್ರಾಂ):
ಬೆಂಗಳೂರು – ₹95,730
ನಾಗ್ಪುರ – ₹95,730
ಮುಂಬೈ – ₹95,730
ಚೆನ್ನೈ – ₹95,730
ಕೋಲ್ಕತ್ತಾ – ₹95,730
ಪಟ್ನಾ – ₹95,780
ಸೂರತ್ – ₹95,780
ಚಂಡೀಗಢ – ₹95,880
ಲಕ್ನೋ – ₹95,880

ಇನ್ನೂ ಬಂಗಾರ/ಬೆಳ್ಳಿ ಹೂಡಿಕೆಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿದುಕೊಳ್ಳಬೇಕೆ? www.suddibindu.in ಫಾಲೋ ಮಾಡಿ.

ಇದನ್ನೂ ಓದಿ