ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಹಿಂಸಾತ್ಮಕವಾಗಿ ಗೋವುಗಳನ್ನ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನ ಬಂಧಿಸಿ ಜಾನುವಾರುಗಳನ್ನ ರಕ್ಷಣೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಳೆಗದ್ದೆ ಟೋಲ್ ಗೇಟ್ ಬಳಿ ನಡೆದಿದೆ.
- Bigg Boss/ಬಿಗ್ ಬಾಸ್ ಮನೆಗೆ ತಾತ್ಕಾಲಿಕ ಬೀಗ ಜಡಿದ ಅಧಿಕಾರಿಗಳು
- “105 ವರ್ಷಗಳ ಬಳಿಕ ಕೆಡಿಸಿಸಿ ಬ್ಯಾಂಕ್ನ ಇತಿಹಾಸದಲ್ಲಿ ದಿಟ್ಟ ಮಹಿಳೆಯ ಹೊಸ ಅಧ್ಯಾಯ”
- ಶಾಲೆಗಳಿಗೆ ಇನ್ನೂ ಹತ್ತು ದಿನ ರಜೆ ವಿಸ್ತರಣೆ : ಸಿ ಎಂ ಸಿದ್ದರಾಮಯ್ಯ
- ಶಾಲಾ ಸಮಯದ ಬದಲಾವಣೆ : ಶಿಕ್ಷಕರ ಸಂಘಟನೆ ವಿರೋಧ
ಹಾಲಿನ ವಾಹನವೊಂದರಲ್ಲಿ ಹಿಂಸಾತ್ಮಕವಾಗಿ 13ಗೋವುಗಳನ್ನ ಪುಣಾದಿಂದ ಭಟ್ಕಳಕ್ಕೆ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಹೊಳೆಗದ್ದೆ ಟೋಲ್ ಬಳಿ ಕರ್ತವ್ಯದಲ್ಲಿದ್ದ ಕುಮಟಾ ಪೊಲೀಸರು ವಾಹನ ತಪಾಸಣೆ ಮಾಡಿರುವ ವೇಳೆ ಗೋವುಗಳು ಇರುವುದು ಪತ್ತೆಯಾಗಿದೆ. ಗೋಕಳ್ಳರು ವಾಹನದಲ್ಲಿ ಹಿಂಸಾತ್ಮಕವಾಗಿ ಸಾಗಾಟ ಮಾಡುವುದನ್ನ ತಿಳಿದ ಪೊಲೀಸರು ಆ ವಾಹನವನ್ನ ತಡೆದು ತಪಾಸಣೆ ಮಾಡಿದ್ದಾರೆ.
ಈ ವೇಳೆ ಒಟ್ಟು 13 ಗೋವುಗಳು ಪತ್ತೆಯಾಗಿದ್ದು,ಅದರಲ್ಲಿಐದು ಗೋವುಗಳ ಸಾವನ್ಮಪ್ಪಿದ್ದು, 9 ಗೋವುಗಳು ಮಾತ್ರ ಬದುಕುಳಿದಿತ್ತು. ತಕ್ಷಣ ಆರೋಪಿಯನ್ನ ತಮ್ಮ ವಾಹನಕ್ಕೆ ತುಂಬಿಕೊಂಡು ಜಾನುವಾರು ತುಂಬಿದ ಲಾರಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.