ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಪ್ರವಾಸೋದ್ಯಮದ ಮೇಲೆ ನಿಂತಿರುವ
ಗೋವಾಕ್ಕೆ ಪ್ರತಿನಿತ್ಯವೂ ದೇಶ ವಿದೇಶಗಳಿಂದ ಸಾವಿರಾರೂ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಅದರಲ್ಲಿ ನಮ್ಮ ಕನ್ನಡಿಗರೆ ಅತೀ ಹೇಚ್ಚಿನ ಸಂಖ್ಯೆಯಲ್ಲಿ ಗೋವಾಕ್ಕೆ ಹೋಗತ್ತಿರತ್ತಾರೆ. ಆದರೆ ಇನ್ನಮೇಲೆ ಅಲ್ಲಿಗೆ ಹೋಗುವ ಪ್ರವಾಸಿಗರು ಹೆದ್ದಾರಿ ಅಕ್ಕ-ಪಕ್ಕದಲ್ಲಿ ಅಡುಗೆ ಮಾಡಿ ಊಟ ಮಾಡಿ ಹೋಗುವಂತಿಲ್ಲ. ಒಂದೊಮ್ಮೆ ಅಂತಹ ಘಟನೆಗಳು ಕಂಡು ಬಂದರೆ ಅವರ ವಿರುದ್ಧ ಕ್ರಮ ಜರುಗಿಸುವುದಾಗಿ ಗೋವಾ ಸಿಎಂ ಪ್ರಮೋದ್ ಸಾವಂತ್ ಖಡಕ್ ಆದೇಶ ಹೋರಡಿಸಿದ್ದಾರೆ.
ನಿತ್ಯವೂ ಗೋವಾಕ್ಕೆ ನಮ್ಮ ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಸಾವಿರಾರು ಪ್ರವಾಸಿಗರು ಗೋವಾಕ್ಕೆ ಪ್ರವಾಸಕ್ಕೆ ಅಂತಾ ಹೋಗತ್ತಾರೆ. ಆದರೆ ಅಲ್ಲಿ ಮದ್ಯ ಹೊರತು ಪಡಿಸಿ ಉಳಿದ ಊಟ,ತಿಂಡಿಯ ಬೆಲೆ ತುಂಬಾ ದುಬಾರಿ, ಹೀಗಾಗಿ ಅನೇಕರು ಪ್ರವಾಸಕ್ಕೆ ತೆರಳುವಾಗಲೇ ತಮ್ಮ ಜೊತೆಯಲ್ಲಿ ಅಡುಗೆ ಮಾಡೋದಕ್ಕೆ ಬೇಕಾದ ಗ್ಯಾಸ್ ಸೇರಿದಂತೆ ಎಲ್ಲವನ್ನ ತೆಗೆದುಕೊಂಡು ಹೋಗಿ ಅಲ್ಲಿಯೇ ಎಲ್ಲಾದ್ದರೂ ಒಳ್ಳೆ
ಸ್ಥಳವನ್ನ ನೋಡಿ ಅಡುಗೆ ಮಾಡಿ ಊಟ ಮಾಡಿ ಬರೋದು ಸಾಮಾನ್ಯ, ಇದು ಗೋವಾ ರಾಜ್ಯದಲ್ಲಿ ಅಷ್ಟೆ ಅಲ್ಲ.ನಮ್ಮ ಕರ್ನಾಟಕ ಸೇರಿದಂತೆ ಅನೇಕ ಕಡೆಯಲ್ಲಿ ಕಂಡು ಬರತ್ತಾನೆ ಇರುತ್ತದೆ.
ಆದರೆ ಗೋವಾ ರಾಜ್ಯಕ್ಕೆ ಇನ್ನಮೇಲೆ ಯಾರೆ ಪ್ರವಾಸಿಗರು ಬರಬೇಕಾದರೂ ಅವರು ಯಾವ ಕಾರಣಕ್ಕೂ ತಮ್ಮ ಜೊತೆಗೆಯಲ್ಲಿ ಅಡುಗೆ ಸಾಮಗ್ರಿಯಾಗಲಿ ಅಥವಾ ಅಡುಗೆ ಮಾಡೋದಕ್ಕೆ ಗ್ಯಾಸ್ ಇತ್ಯಾದಿಗಳನ್ನ ತೆಗೆದುಕೊಂಡು ಬರುವಂತಿಲ್ಲ. ಅಂತಹ ವಾಹನಗಳನ್ನ ಗೋವಾ ಗಡಿ ಪ್ರದೇಶಲ್ಲೆ ತಪಾಸಣೆ ನಡೆಸಲಾಗುವುದು ಒಂದು ವೇಳೆ ಪ್ರವಾಸಿಗರು ಅಡುಗೆ ಸಾಮಗ್ರಿಗಳನ್ನಾಗಲಿ ಅಥವಾ ಗ್ಯಾಸ್ ಸಿಲೆಂಡರ್ ತೆಗೆದುಕೊಂಡು ಬಂದರೆ ಸ್ಥಳದಲ್ಲೇ ಎಲ್ಲವನ್ನ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಅಲ್ಲದೆ ಕದ್ದು ಮುಚ್ಚಿ ಏನಾದ್ರೂ ಗಡಿ ಪ್ರವೇಶಿಸಿ ಹೆದ್ದಾರಿ ಪಕ್ಕದಲ್ಲಿ ಅಡುಗೆ ಮಾಡಿರುವುದು ಕಂಡು ಬಂದರೆ ನಮ್ಮ ಪೊಲೀಸರು ಅಂತಹವರ ವಿರುದ್ಧ ಕ್ರಮ ಜರುಗಿಸಲಿದ್ದಾರೆ ಎಂದು ಸಿಎಂ ಪ್ರಮೋದ್ ಸಾವಂತ್ ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ