ಬೆಂಗಳೂರು: ಏಪ್ರಿಲ್ ಮೊದಲನೇ ದಿನಕ್ಕೆ ಬರ್ಜರಿಯಾಗಿ 930ರೂಪಾಯಿಗಳಷ್ಟು ಹೆಚ್ಚಾಗಿದ್ದ ಚಿನ್ನದ ಬೆಲೆ, ಎರಡನೇ ದಿನವೂ ಹಾಗೆ ಮುಂದುವರೆದಿದೆ. ಇಂದು ಚಿನ್ನದ ದರದಲ್ಲಿ ಏರಿಕೆ ಅಥವಾ ಇಳಿಕೆಯಾಗಿಲ್ಲ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಎಷ್ಟು ಎಂಬುದನ್ನು ನೋಡಿ.

ಇಂದು ದರ ಎಷ್ಟಿದೆ.?
ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಪ್ರವೃತ್ತಿಯಲ್ಲಿದ್ದರೂ, ಇಂದು ಯಾವುದೇ ಬದಲಾವಣೆಯಿಲ್ಲ. ಹೀಗಾಗಿ ಏಪ್ರಿಲ್ 2ರಂದು 22 ಕ್ಯಾರೆಟ್ ಚಿನ್ನದ 1 ಗ್ರಾಂ ದರವು ₹8,510 ಆಗಿದೆ. 24 ಕ್ಯಾರೆಟ್ ಚಿನ್ನದ ದರ ₹9,284.

10 ಗ್ರಾಂ ಚಿನ್ನದ ದರ ಎಷ್ಟು?
10 ಗ್ರಾಂ 22 ಕ್ಯಾರೆಟ್ ಚಿನ್ನದ ದರ ₹85,100, ಮತ್ತು 10 ಗ್ರಾಂ 24 ಕ್ಯಾರೆಟ್ ಚಿನ್ನದ ದರ ₹92,840 ಆಗಿದೆ.

ಬೆಂಗಳೂರು ಚಿನ್ನದ ದರ
ಬೆಂಗಳೂರು ನಗರದಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ದರ ₹8,510. ಬೆಳ್ಳಿಯ ಬೆಲೆಯೂ ಸ್ಥಿರವಾಗಿದ್ದು, 1 ಗ್ರಾಂ ಬೆಳ್ಳಿಯ ದರ ₹105. 1 ಕೆಜಿ ಬೆಳ್ಳಿಯ ದರ ₹1,05,000.

ಮಾರ್ಚ್ 1 ರಂದು ₹7,940 ಇದ್ದ ಚಿನ್ನದ ದರವು ಮಾರ್ಚ್ 31ಕ್ಕೆ ₹8,425 ಆಗಿ, ಒಂದು ತಿಂಗಳಲ್ಲಿ ₹485 ಏರಿಕೆ ಕಂಡಿದೆ. ಏಪ್ರಿಲ್ ತಿಂಗಳಲ್ಲಿಯೂ ಚಿನ್ನದ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ. ಇಂದು ಮಾತ್ರ ದರ ನಿಷ್ಪಕ್ಷಪಾತವಾಗಿದೆ. ಇತರ ಷೇರುಗಳು ಕುಸಿದಿರುವುದರಿಂದ ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗಿದೆ, ಜೊತೆಗೆ ಅಮೆರಿಕದ ಹೊಸ ನೀತಿಗಳಿಂದಾಗಿ ಚಿನ್ನದ ದರ ಏರಿಕೆಯಾಗಿದೆ. ಚಿನ್ನದ ಬೆಲೆ ಇನ್ನಷ್ಟು ಏರಿಕೆ ಸಾಧ್ಯತೆ ಇರುವುದರಿಂದ ವ್ಯಾಪಾರಿಗಳು ಮತ್ತು ಗ್ರಾಹಕರು ಚಿನ್ನ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ, ಇದರಿಂದಾಗಿ ಬೇಡಿಕೆ ಹೆಚ್ಚಾಗಿದೆ.

ಇದನ್ನೂ ಓದಿ