ಬೆಂಗಳೂರು: ಹನಿಟ್ರಾಪ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನವನ್ನು ಉಂಟುಮಾಡಿದೆ. ಇದಾದ ಬಳಿಕ,ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯೆಂದರೆ ಬಸವರಾಜ್ ಹೊರಟ್ಟಿ ವಿಧಾನ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆನ್ನುವ ರಾಜೀನಾಮೆ ಪತ್ರ ಸಾಮಾಜಿ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೈರಲ್ ಆಗಿರುವ ರಾಜೀನಾಮೆ ಪತ್ರದಲ್ಲಿ ಮಾರ್ಚ್ 18 ಎನ್ನುವ ದಿನಾಂಕ ನಮೂದಾಗಿದೆ. ಹಾಗೇ ಪತ್ರದಲ್ಲಿ ಹೊರಟ್ಟಿ ಅವರ ಸಹಿ ಸಹ ಇಲ್ಲ. ಹೀಗಾಗಿ ರಾಜೀನಾಮೆ ಪತ್ರ ಹಲವು ಗೊಂದಲಗಳಿಗೆ ಕಾರಣವಾಗಿದೆ.
ಬಸವರಾಜ್ ಹೊರಟ್ಟಿ ತಮ್ಮ ರಾಜೀನಾಮೆ ಪತ್ರವನ್ನು ವಿಧಾನ ಪರಿಷತ್ ಉಪಾಧ್ಯಕ್ಷ ಪ್ರಣೇಶ್ ಅವರಿಗೆ ಕಳುಹಿಸಿ, ಏಪ್ರಿಲ್ 1ರೊಳಗೆ ತಮ್ಮ ರಾಜೀನಾಮೆಯನ್ನು ಅಂಗೀಕರಿಸಿ,ಅಧ್ಯಕ್ಷ ಸ್ಥಾನದಿಂದ ಅವರನ್ನು ಬಿಡುಗಡೆ ಮಾಡಲು ಕೇಳಿದ್ದಾರೆ.
ವಿಧಾನ ಪರಿಷತ್ ಸದಸ್ಯರ ವರ್ತನೆ ಸಮರ್ಪಕವಾಗಿಲ್ಲ. ಆದ್ದರಿಂದ, ಅವರು ಇಂದು ಬೆಳಿಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ವಿಧಾನ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಈ ನಂತರ, ಅವರು ತಮ್ಮ ರಾಜೀನಾಮೆ ಪತ್ರವನ್ನು ಉಪಾಧ್ಯಕ್ಷರಿಗೆ ಕಳುಹಿಸಿದ್ದಾರೆ.
ಇದನ್ನೂ ಓದಿ
- ಗೋಕರ್ಣ ಕಡಲ ತೀರದಲ್ಲಿ ಪ್ರವಾಸಿಗನ ಜೀವ ಉಳಿಸಿದ ಜೀವ ರಕ್ಷಕರು
- ತಿಂಡಿ ಪ್ಯಾಕೆಟ್ನೊಳಗಿನ ಆಟಿಕೆ ಸ್ಫೋಟ : ಶಾಶ್ವತವಾಗಿ ಕಣ್ಣು ಕಳೆದುಕೊಂಡ ಎಂಟು ವರ್ಷದ ಬಾಲಕ
- ಗೋಕರ್ಣ ಪಿ.ಎಸ್.ಐ. ಖಾದರ ಬಾಷಾ ಕುಮಟಾ ಠಾಣೆಗೆ ವರ್ಗಾವಣೆ
- ಗೋಕರ್ಣ ಕಡಲ ತೀರದಲ್ಲಿ ಪ್ರವಾಸಿಗರ ಜೀವ ರಕ್ಷಣೆ: ಜೀವ ರಕ್ಷಕ ಸಿಬ್ಬಂದಿಗಳಿಂದ ಕಾರ್ಯಾಚರಣೆ
- ಮಗನಿಂದಲೇ ವೃದ್ಧ ತಂದೆಗೆ ಚಾಕು ಇರಿತ: ಮೊಕ್ಕಳ ವಿಚಾರಕ್ಕೆ ಗಲಾಟೆ




