ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು :ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣದ ಬಗ್ಗೆ ಸರಕಾರದಲ್ಲಿ ಯಾವುದೇ ಪ್ರಸ್ತಾವನೆ ಇಲ್ಲವೆಂದು ವೈದ್ಯಕೀಯ ಸಚಿವ ಶರಣಬಸಪ್ಪ ಪ್ರತಿಕ್ರಿಯಿಸಿದ್ದಾರೆ.

ಈ ವಿಚಾರವಾಗಿ ಕುಮಟಾ ಶಾಸಕ ದಿನಕರ ಶೆಟ್ಟಿ ಅವರು ಕುಮಟಾದಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಬಗ್ಗೆ ಅಧಿವೇಶದಲ್ಲಿ ಪ್ರಶ್ನೆ ಮಾಡಿದ್ದರು.ಶಾಸಕರ ಪ್ರಶ್ನೆಗೆ ಉತ್ತರಿಸಿದ ವೈದ್ಯಕೀಯ ಶಿಕ್ಷಣ ಸಚಿವ ಶರಣಬಸಪ್ಪ ಕುಮಟಾದಲ್ಲಿ ಸೂಪರ್ ಸ್ಪೇಷಾಲಿಟಿ ನಿರ್ಮಾಣದ ಬಗ್ಗೆ ಇದುವರೆಗೆ ಪ್ರಸ್ತಾವನೆ ಬಂದಿಲ್ಲ.ಕಾರವಾರದಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಆಗಬೇಕು ಎನ್ನುವ ಬಗ್ಗೆ ಬೇಡಿಕೆ ಇದೆ.ಮೊನ್ನೆಯಷ್ಟೆ ಕಾರವಾರಕ್ಕೆ ಹೋಗಿದ್ದ ವೇಳೆ ಅಲ್ಲಿನ ಜನಪ್ರತಿನಿಧಿಗಳು,ಸಂಘ ಸಂಸ್ಥೆಗಳು ಕಾರವಾರಕ್ಕೆ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಬೇಕು ಎನ್ನುವ ಬಗ್ಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ತಮ್ಮ ಇಲಾಖೆಯಿಂದ ಕೂಡ ಪ್ರಸ್ತಾವನೆ ಕೊಟ್ಟಿದ್ದೇವೆ.ಸೂಪರ್ ಸ್ಪೇಷಾಲಿಟಿ ಆಗಬೇಕಾದರೆ. ಅದಕ್ಕೆ ಸಪೋರ್ಟ್ ಆಗಿರುವ ಕಡೆ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗೆ ಮಾಡಬೇಕಾಗುತ್ತದೆ. ಕುಮಟಾದಲ್ಲಿ ಮಾಡಿದಲ್ಲಿ ಅದು ಕಷ್ಟವಾಗಬಹುದು. ಹೀಗಾಗಿ ಕಾರವಾರದಲ್ಲೇ ಮಾಡುವುದು ಸೂಕ್ತ, ರಾಜ್ಯದ ಬೇರೆ ಕಡೆ ಸರಕಾರದಿಂದ ಮಾಡಿರುವ ಬಹುತೇಕ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗಳನ್ನ ಮೆಡಿಕಲ್ ಕಾಲೇಜಿಗೆ ಹೊಂದಿಕೊಂಡೆ ಮಾಡಲಾಗಿದೆ. ಎನ್ನುವ ಮೂಲಕ ಕುಮಟಾದಲ್ಲಿ ನಿರ್ಮಾಣವಾಗಬೇಕು ಎನ್ನುವ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಕನಸು ಇಡೇರುವ ಲಕ್ಷಗಳು ಕಾಣುತ್ತಿಲ್ಕ.‌

ಇದನ್ನೂ ಓದಿ