!ಸುದ್ದಿಬಿಂದು ಬ್ಯೂರೋ(suddibindu digital news)
ಮೈಸೂರು: ಕೃಷಿ ಭೂಮಿಯಲ್ಲಿ ಬೆಳೆಯುತ್ತಿರುವ ಬೆಳೆಗಳ ಮೇಲೆ ಸಾರ್ವಜನಿಕರ ದೃಷ್ಠಿ ಬಿಳಬಾರದೆಂದು ಬೆಳೆ ಕಾಪಾಡಲು ಪ್ರೇತ ಮುಖವಾಡಗಳಿರುವ ಭಯಾನಕ ಗೊಂಬೆಗಳನ್ನು ಅಳವಡಿಸುವುದನ್ನು ನಾವು ಕಂಡಿದ್ದೇವೆ. ಇದರ ನಡುವೆ, ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಹತ್ತಿರದ ಕಕ್ಕಣಹಟ್ಟಿ ಗ್ರಾಮದ ರೈತ ಐನಾಥಿ ಹೊಸ ಕಲ್ಪನೆಯನ್ನು ಅನ್ವೇಷಿಸಿದ್ದಾರೆ.
ಅವರು ತಮ್ಮ ತೋಟದ ಸುತ್ತ ಅರ್ಧನಗ್ನ ಮಾಡೆಲ್ಗ್‌ಗಳ ಫೋಟೋಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕರ ನಡುವೆ ಚರ್ಚೆಗೆ ಕಾರಣರಾಗಿದ್ದಾರೆ. ನಂಜನಗೂಡು ತಾಲ್ಲೂಕಿನ ಕಕ್ಕಣಹಟ್ಟಿ ಗ್ರಾಮದ ರೈತ ಸೋಮೇಶ್ ಈ ವಿಶಿಷ್ಟವಾದ ಕಲ್ಪನೆಯನ್ನು ಅನುಸರಿಸಿ, ಜನರ ಗಮನ ಸೆಳೆದಿದ್ದಾರೆ.
ತಮ್ಮ ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದಿರುವ ಬಾಳೆ ಬೆಳೆಯು ತುಂಬಾ ಚೆನ್ನಾಗಿ ಬೆಳೆಯಲಾಗಿದೆ. ಸಾರ್ವಜನಿಕರು ಮತ್ತು ಹಾದುಹೋಗುವವರು ಈ ಬೆಳೆಯನ್ನು ಗಮನಿಸಬಾರದು ಎಂಬ ಕಾರಣಕ್ಕೆ, ಗೊಂಬೆಗಳ ಬದಲು, ಸುಮಾರು 10 ಸ್ಥಳಗಳಲ್ಲಿ ಮಾಡೆಲಗಳ ಫೋಟೋಗಳನ್ನು ಅಳವಡಿಸಿದ್ದಾರೆ
ಅ ದಾರಿಯಲ್ಲಿ ಓಡಾಡುವ ಸಾರ್ವಜನಿಕರು ಬೆಳೆದಿರುವ ಬಾಳೆ ತೋಟದ ಕಡೆ ಗಮನ ಕೊಡದೆ, ಅಳವಡಿಸಿರುವ ಮಾಡೆಲಗಳ ಚಿತ್ರಗಳತ್ತ ಕಣ್ಣಿಟ್ಟಿದ್ದಾರೆ. ರೈತ ಸೋಮೇಶ್ ಐನಾಥಿಯ ಈ ಕಲ್ಪನೆಯು ಕೆಲವು ಗ್ರಾಮಸ್ಥರನ್ನು ಕೋಪಗೊಳಿಸಿದ್ದರೆ, ಕೆಲವರನ್ನು ವಿಚಿತ್ರ ಭಾವನೆಯಲ್ಲಿ ಮುಳುಗಿಸಿರುವುದು ಸುಳ್ಳಲ್ಲ.
ಇದನ್ನೂ ಓದಿ