ಸುದ್ದಿಬಿಂದು ಬ್ಯೂರೋ ವರದಿ (Suddibindu Digital News)
ಚಿಕ್ಕಮಂಗಳೂರು : ಜಿಲ್ಲಾಪಂಚಾಯತ್ ಕೆಡಿಪಿ ನಾಮನಿರ್ದೇಶಿತ ಸದಸ್ಯರೂ ಆಗಿರುವ ಪರವಾನಗಿ ಪಡೆದ ಸರ್ವೇಯರ್ ಒಬ್ಬರು ವ್ಯಕ್ತಿ ಒಬ್ಬರಿಂದ ನಾಲ್ಕು ಸಾವಿರ ರೂಪಾಯಿ ಲಂಚಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ,ಚಿಕ್ಕಮಂಗಳೂರು ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಅಶೋಕ್ ಎಂಬುವವರು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಕುರಿತು ಹುಳ್ಳೇಹಳ್ಳಿ ವೆಂಕಟೇಶ್ ಸಲ್ಲಿಸಿದ ನಿಖರವಾದ ದೂರು ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಕದೂರು ತಾಲೂಕಿನ ಹುಳ್ಳೇಹಳ್ಳಿ ಗ್ರಾಮದಲ್ಲಿರುವ ವೆಂಕಟೇಶ್ ಅವರ ಜಮೀನಿನ ಹಳೆಯ ನಕ್ಷೆ ಸರಿಯಾಗಿರಲಿಲ್ಲ. ಅದನ್ನ ತಿದ್ದುಪಡಿ ಮಾಡಿ ನಕ್ಷೆ ಸಿದ್ಧಪಡಿಸುವಂತೆ ಅವರು ಕದೂರು ಉಪವಿಭಾಗದ ಎಡಿಎಲ್ಆರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.
ಈ ಪ್ರಕ್ರಿಯೆಯ ವೇಳೆಯಲ್ಲಿ, ಸರ್ವೇಯರ್ ಅಶೋಕ್ ಮೊದಲು ವೆಂಕಟೇಶ್ ಅವರ ಸಹೋದರರಿಂದ 1,200 ಸ್ವೀಕರಿಸಿ, ನಂತರ ದಸ್ತಾವೇಜು ಸಿದ್ಧಪಡಿಸಲು 5,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಣದ ಮೊತ್ತ ಕಡಿಮೆ ಮಾಡುವ ಪ್ರಯತ್ನದ ನಂತರ, ಅಂತಿಮವಾಗಿ 4,000 ನೀಡಲು ಒಪ್ಪಿಕೊಂಡರು.
ಕದೂರು ಸರ್ವೇ ಇಲಾಖೆ ಕಚೇರಿಯಲ್ಲಿ ವೆಂಕಟೇಶ್ ಅವರಿಂದ 4,000 ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಅಶೋಕ್ ಅವರನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯನ್ನು ಲೋಕಾಯುಕ್ತ ಡಿವೈಎಸ್‌ಪಿ ತಿರುಮಲೇಶ್ ಮತ್ತು ಇನ್ಸ್‌ಪೆಕ್ಟರ್ ಅನಿಲ್ ರಠೋರೆ ಅವರ ನೇತೃತ್ವದಲ್ಲಿ ನಡೆಸಲಾಯಿತು. ಈ ತಂಡದಲ್ಲಿ ಮಲ್ಲಿಕಾರ್ಜುನ್, ಚಂದ್ರಶೇಖರ್, ಮಹೇಶ್, ವೇದಾವತಿ, ಪ್ರಸಾದ್, ಚಂದ್ರಶೆಟ್ಟಿ ಮತ್ತು ಮುಜೀಬ್ ಸೇರಿದಂತೆ ಹಲವರು ಪಾಲ್ಗೊಂಡರು.ಈ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ