ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ;ಅನಂತಕುಮಾರ ಹೆಗಡೆ ರಾಜಕೀಯದಿಂದ ದೂರವಾದ ಬಳಿಕ ಹಿಂದುತ್ವ ದೂರ ಸರಿದಿತ್ತು. ಹಿಂದುತ್ವದ ಮೂಲಕ ಇಡೀ ರಾಜ್ಯದಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದ ಅನಂತಕುಮಾರ ಹೆಗಡೆ ಈ ಬಾರಿ ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ನೀಡಲಿಲ್ಲ ಎಂಬುದಕ್ಕೆ ಬಿಜೆಪಿಯಿಂದಲೇ ಅಂತರ ಕಾಯ್ದುಕೊಂಡಿದ್ದರು. ಅನಂತ ಇಲ್ಲದ ಬಿಜೆಪಿ. ಹಿಂದುತ್ವದ ಇಲ್ಲದ ಈಗಿನ‌ ಬಿಜೆಪಿ ಇದು ಅವರ ಅಭಿಮಾನಿಗಳಿಗಂತೂ ತೀವ್ರ ಬೇಸರ ಮೂಡಿಸಿತ್ತು.

ಪ್ರಖರ ಹಿಂದು ಭಾಷಣಕಾರರಾಗಿ ಮಿಂಚುತ್ತಿದ್ದ ಅನಂತಕುಮಾರ ಹೆಗಡೆ ದೂರವಾದ ಬಳಿಕ ಅವರ ಪಕ್ಕಾ ಶಿಷ್ಯ ಮಾಜಿ ಸಚಿವ ಆನಂದ ಅಸ್ನೋಟಿಕರ್ ಉಗ್ರ ಹಿಂದುತ್ವವಾದಿಯಾಗಿ ಅವರದೇ ರೂಪದಲ್ಲಿ ಎಂಟ್ರಿ ಕೊಟ್ಟು ಹಿಂದುತ್ವ ಸ್ಥಾಪಿಸಲು ಮುಂದಾಗಿರುವುದಕ್ಕೆ ಜನರು ಫುಲ್ ಖುಷಿಯಾಗಿದ್ದಾರೆ.

ಅನಂತನ ಸ್ಥಾನ ತುಂಬಿದ ಮರಿ ಹುಲಿ
ಹಿಂದುತ್ವ ವಿಷಯ ಬಂದರೆ ಸಾಕು ತಟ್ಟಣೆ ನೆನಪಾಗುವುದು ಹಿಂದು ಹೃದಯ ಸಾಮ್ರಾಟ…ಹಿಂದು ಹುಲಿ ಅನಂತಕುಮಾರ ಹೆಗಡೆ ಹೆಸರು.ಹಿಂದು ಹುಲಿ ಬಿಜೆಪಿಯಿಂದ ಅಂತರ ಕಾಯ್ದುಕೊಂಡು ದೂರವಿದ್ದ ದಿನದಿಂದ ಅವರ ಅಸಂಖ್ಯಾತ ಅಭಿಮಾನಿಗಳಿಗಂತೂ ತೀವ್ರ ನಿರಾಸೆ ಮೂಢಿಸಿತ್ತು.ಅನಂತಕುಮಾರ ಹೆಗಡೆ ನಿರ್ಗಮನದ ಬಳಿಕ ಕಂಗೆಟ್ಟಿದ್ದ ಅನಂತಕುಮಾರ ಅಭಿಮಾನಿಗಳಿಗೆ.ಹಿಂದುಗಳಿಗೆ ಈಗ ಅನಂತನ ಪಕ್ಕಾ ಶಿಷ್ಯ ಕೈಜೋಡಿಸಿರುವುದು ಬಲ ಸಿಕ್ಕಂತಾಗಿದೆ.

ಆನಂದ ಅಸ್ನೋಟಿಕರ್ ಅನಂತನ ಪ್ರತಿರೂಪವಾಗಿ ಗರ್ಜಿಸಿರುವುದಕ್ಕೆ ಅನಂತನ ಅಭಿಮಾನಿಗಳು ಪುಲ್ ಪಿಧಾ ಆಗಿದ್ದಾರೆ. ಹಾಗೇ ನೋಡಿದ್ರೇ ಮಾಜಿ ಸಚಿವ ಆನಂದ ಅಸ್ನೋಟಿಕರ್ ಬಿಜೆಪಿಯಲ್ಲಿಯೇ ಇದ್ದವರು. ಬಿಜೆಪಿಯಿಂದ ಅಂತರ ಕಾಯ್ದುಕೊಂಡ ಇದ್ದ ಆನಂದ ಈಗ ಅನಂತಕುಮಾರ ಹೆಗಡೆಯವರ ಸ್ಥಾನ ತುಂಬಲು ಮುಂದಾಗಿದ್ದಾರೆ. ಅನಂತ ಇಲ್ಲದ ಜಿಲ್ಲೆಯಲ್ಲಿ ಹಿಂದುತ್ವ ಸ್ಥಾಪಿಸಲು ಆನಂದ ಮುಂದಾಗಿರುವುದನ್ನು ನೋಡಿದರೆ ಅನಂತನ ಆವಾಂತರ ಎಂದು ಜನ ಹೇಳಿಕೊಳ್ಳಲು ಶುರು ಮಾಡಿಕೊಂಡಿದ್ದಾರೆ.

ಹಿಂದು ಉತ್ಸವದಲ್ಲಿ ಆನಂದ ಹವಾ
ಹಣೆಯಲ್ಲಿ ಕೇಸರಿ ತಿಲಕ…ಮೈ ಮೇಲೆ ಕೇಸರಿ ಶಾಲು…ಇದೆಲ್ಲ ಗಮನಿಸಿದ್ರೇ ಹಳಿಯಾಳ ಬಿಜೆಪಿಯಲ್ಲಿ ಆದ ಮಾಸ್ಟರ್ ಸ್ಟ್ರೋಕ್ ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿಯೂ ಆಗುವ ಸಾಧ್ಯತೆ ಕಂಡುಬರುತ್ತಿದೆ.
ಸದ್ಯ ಜೆಡಿಎಸ್ ನಲ್ಲಿದ್ದು, ಪಕ್ಷ ಸಂಘಟನೆಯಲ್ಲಿ ಹಗಲಿರುಳು ಒಡಾಡುತ್ತಿರುವ ಮಾಜಿ ಸಚಿವ ಆನಂದ ಅಸ್ನೋಟಿಕರ್ ಹಸಿರು ಶಾಲು ಬಿಟ್ಟು ಕೇಸರಿ ಶಾಲು ಹೆಗಲಿಗೆ ಏರಿಸಿಕೊಂಡಿರುವುದು ಕುತೂಹಲಕ್ಕೂ ಕಾರಣವಾಗಿದೆ.ಸದ್ಯ ಸಂಸದ ವಿಶ್ವೇಶ್ವರ ಹೆಗಡೆ ಜೊತೆ ಉತ್ತಮ ಸಂಬಂಧ ಹೊಂದಿರುವ ಆನಂದ ಅಸ್ನೋಟಿಕರ್  ಬಿಜೆಪಿಗೆ ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಅವರನ್ನು ಬಿಜೆಪಿಗೆ ಕರೆ ತರಲು ಬಿಜೆಪಿಯಲ್ಲಿಯೇ ತಯಾರಿ ನಡೆಸಿರುವುದು ಗುಟ್ಟಾಗಿ ಉಳಿದಿಲ್ಲ. ಇದರ ಮುಂದುವರಿದ ಭಾಗ ಎಂಬಂತೆ ಇಂದು ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆಯಲಿರುವ ಹಿಂದೂ ಉತ್ಸವದಲ್ಲಿ ಭಾಗವಹಿಸಿರುವುದನ್ನು ಗಮನಿಸಿದ್ರೇ ಬಿಜೆಪಿ ಮನೆ ಸೇರುವ ದಿನ ಹತ್ತಿರದಲ್ಲಿಯೇ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ