Veera chandrahasa poster viral|ಯಕ್ಷಗಾನ ಕ್ಷೇತ್ರದಲ್ಲಿ ತನ್ನ ಗುರುತು ಮೂಡಿಸಲು ಸ್ಯಾಂಡಲ್‌ವುಡ್ ತಾರೆಯರು ಎರಡು ವಿಶೇಷ ಪ್ರಯತ್ನಗಳು ಇದೀಗ ಸಾಕಷ್ಟು ಚರ್ಚೆಯಲ್ಲಿದೆ. ಮೊನ್ನೆಯಷ್ಟೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದ ಯಕ್ಷಗಾನದಲ್ಲಿ ಕನ್ನಡ ಸಿನಿಮಾ ನಟಿ ಉಮಾಶ್ರೀ ಮಂಥರೆಯ ಪಾತ್ರ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಇದರ ಬೆನ್ನಲ್ಲೆ ಇದೀಗ ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್‌ಕುಮಾರ್ (Hattrick HeroShivraj Kumar) ವೀರ ಚಂದ್ರಹಾಸ ಸಿನಿಮಾದಲ್ಲಿ, ಶಿವಣ್ಣ ಯಕ್ಷಗಾನ ವೇಷಧಾರಿಯಾಗಿ ಬಣ್ಣಹಚ್ಚಲಿದ್ದಾರೆ.

ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ತನ್ನ ಅನಾರೋಗ್ಯದಲ್ಲಿಯೂ ಯಕ್ಷಗಾನ ಆಧಾರಿತ ಸಿನಿಮಾದಾದ ವೀರ ಚಂದ್ರಹಾಸದಲ್ಲಿ ಬಣ್ಣಹಚ್ಚಿರುವುದು ಎಲ್ಲರ ಗಮನ ಸೆಳೆದಿದೆ..

ಇತ್ತೀಚೆಗೆ ಬಿಡುಗಡೆಯಾದ ಈ ಸಿನಿಮಾದ ಪೋಸ್ಟರ್‌ನಲ್ಲಿ, ಯಕ್ಷಗಾನದ ಸುಂದರ ವೇಷ ಧರಿಸಿದ ಶಿವಣ್ಣನ ಚಿತ್ರ ಎಲ್ಲೆಡೆ ವೈರಲ್ ಆಗುತ್ತಿದೆ.. ರವಿ ಬಸ್ರೂರು ನಿರ್ದೇಶಿಸಿರುವ(Veer Chandrahasa directed by Ravi Basruru)ವೀರ ಚಂದ್ರಹಾಸ ಸಿನಿಮಾದಲ್ಲಿ, ಶಿವಣ್ಣ ಯಕ್ಷಗಾನ ವೇಷಧಾರಿಯಲ್ಲಿ ಮೊದಲ ಬಾರಿಗೆ ಅಭಿನಯಿಸುತ್ತಿದ್ದಾರೆ.

ಸಂಕ್ರಾಂತಿ ಸಂದರ್ಭದಲ್ಲಿ ಬಿಡುಗಡೆಯಾದ ಈ ಪೋಸ್ಟರ್‌ನಲ್ಲಿ ಶಿವರಾಜ್ ಕುಮಾರ್, ನಾಡ ಚಕ್ರವರ್ತಿ ಶಿವಪುಟ್ಟ ಸ್ವಾಮಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹಂಚಿಕೊಳ್ಳಲಾಗಿದೆ. ಪ್ರಸ್ತುತ ಈ ಪೋಸ್ಟರ್ ಕರಾವಳಿಯಾದ್ಯಂತ ಹೊಸ ಸಂಚಲನ ಸೃಷ್ಟಿಸಿದೆ.

ಇದನ್ನೂ ಓದಿ