ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ವಿದ್ಯುತ್ ಶಾರ್ಟ್‌ಸರ್ಕ್ಯೂಟ್ ನಿಂದ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಮನೆಯಲ್ಲಿದ್ದ ಲಕ್ಷಾಂತರ ರೂ ಬೆಲೆ ಬಾಳುವ ಸಾಮಗ್ರಿಗಳು ಸುಟ್ಟುಕರಕಲಾಗಿದ್ದು, ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿಯಲ್ಲಿ ನಡೆದಿದೆ.

ಬರ್ಗಿ ಗ್ರಾಮದ ತಾರ ಗಣಪತಿ ನಾಯ್ಕ ಅವರಿಗೆ ಸೇರಿದ್ದ ಮನೆಯಲ್ಲಿ ಈ ಅವಘಡ ನಡೆದಿದೆ. ಶನಿವಾರ ರಾತ್ರಿ ವೇಳೆ ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್‌ಸರ್ಕ್ಯೂಟ್ ಉಂಟಾಗಿದ್ದು, ಇದರಿಂದಾಗಿ ಮನೆಯಲ್ಲಿದ್ದ,‌ಫ್ರೀಜ್,ಫ್ಯಾನ್,ಗ್ಯಾಸ್ ಸ್ಟೋ..ಬಟ್ಟೆ, ಹಾಗೂ ಅಡುಗೆ ಪಾತ್ರೆಗಳು ಹಾಗೂ ಮನೆಯ ಹಂಚು ಸೇರಿದಂತೆ ಮನೆಯೊಳಗಿದ್ದ ಬಹುತೇಕ ವಸ್ತುಗಳು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸುಟ್ಟುಕರಕಲಾಗಿದೆ.ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಮನೆಯಲ್ಲಿದ್ದವರು ಹೊರಗಡೆ ಓಡಿ ಹೋಗಿ ಜೀವ ರಕ್ಷಣೆ ಮಾಡಿಕೊಂಡಿದ್ದಾರೆ.

ಬೆಂಕಿ ಹೊತ್ತಿಕೊಂಡ ಸುದ್ದಿತಿಳಿಯುತ್ತಿದ್ದಂತೆ ಕುಮಟಾದಿಂದ ಬಂದ ಅಗ್ನಿಶಾಮಕ ದಳ ಸಿಬ್ಬಂದಿಗಳು ಹಾಗೂ ಸ್ಥಳೀಯರ ಸಹಾಯದಿಂದಾಗಿ ಮನೆಗೆ ಹೊತ್ತಿಕೊಂಡ‌ ಬೆಂಕಿಯನ್ನ ನಂದಿಸಲಾಗಿದೆ..ಇನ್ನೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗಮನಿಸಿ