ಬಿಗ್ ಬಾಸ್ ‌ಮನೆಯಿಂದ ಹೊರಬಂದಿರುವ ಚೈತ್ರ ಕುಂದಾಪುರ (Chaitra Kundapur)ಪಡೆದಿರುವ ಒಟ್ಟು ಹಣದ ಸಂಪೂರ್ಣ ಮಾಹಿತಿ ಇಲ್ಲಿದೆ.ಈ ವಾರ ಬಿಗ್ ಬಾಸ್ ಕನ್ನಡ ಸೀಸನ್ 11ಮನೆಯಿಂದ ಚೈತ್ರ ಕುಂದಾಪುರ ಎಲಿಮಿನೇಟ್ ಆಗಿದ್ದಾರೆ.

ಚೈತ್ರ ಕುಂದಾಪುರ ಬಾಟಮ್ ಟುನಲ್ಲಿ ಹಲವು ಬಾರಿ ಉಳಿದಿದ್ದರು. ಆದರೆ, ಈ ಬಾರಿ ಚೈತ್ರ ಕುಂದಾಪುರ ಎಲಿಮಿನೇಟ್ ಆಗಿರುವ ಮಾಹಿತಿ ಬರುತ್ತಿದೆ. ಚೈತ್ರ ಕುಂದಾಪುರ ಟಾಸ್ಕ್‌ಗಳಲ್ಲಿ ಹೆಚ್ಚಾಗಿ ಮಿಂಚಿರಲಿಲ್ಲ. ಆದರೆ, ತಮ್ಮ ಮಾತುಗಳಿಂದಲ್ಲೆ ಚೈತ್ರಾ ಬಿಗ್ ಬಾಸ್ ಪ್ರೇಕ್ಷಕರ ಗಮನ ಸೆಳೆದಿದ್ದರು. ಇತರ ಸ್ಪರ್ಧಿಗಳಿಗೆ ಹೋಲಿಸಿದರೆ ಚೈತ್ರ ಕುಂದಾಪುರ ನೇರವಾಗಿ ಮಾತನಾಡುತ್ತಿದ್ದರು. ಚೈತ್ರ ಅವರ ಮಾತುಗಳ ಕಾರಣದಿಂದ ಬಿಗ್ ಬಾಸ್ ಮನೆಯ ಸದಸ್ಯರ ಕೋಪಕ್ಕೂ ಗುರಿಯಾಗಿದ್ದರು.

ಚೈತ್ರ ಕುಂದಾಪುರ ಎಲಿಮಿನೇಟ್ ಆದ ಕೂಡಲೇ, ಬಿಗ್ ಬಾಸ್‌ನಿಂದ ಅವರು ಪಡೆದ ಸಂಭಾವನೆ ಕುರಿತು ಸುದ್ದಿ ವೈರಲ್ ಆಗುತ್ತಿದೆ. ಕೆಲವು ವರದಿಗಳ ಪ್ರಕಾರ, ಚೈತ್ರ ಕುಂದಾಪುರಗೆ ವಾರಕ್ಕೆ 1 ಲಕ್ಷವರೆಗೆ ಸಂಭಾವನೆ ಪಡೆಯುತ್ತಿದ್ದರು ಎನ್ನುವ ಮಾತು ಕೇಳಿಬರುತ್ತಿದೆ. ಈ ಪ್ರಕಾರ, 15ವಾರಗಳ ಕಾಲ ಒಟ್ಟು 15,00,000 ಸಂಭಾವನೆ ಗಳಿಸಿದ್ದಾರೆ..

ಇದು ಮಾತ್ರವಲ್ಲ, ಚೈತ್ರ ಕುಂದಾಪುರಗೆ ಸ್ಪಾನ್ಸರ್‌ಗಳಿಂದ 1,50,000 ಬಹುಮಾನ  ಹಾಗೂ 50,000 ಗಿಫ್ಟ್ ವೊಚರ್ ಲಭಿಸಲಿದೆ. ಇದನ್ನು ಒಟ್ಟುಗೂಡಿಸಿದರೆ, ಚೈತ್ರ ಕುಂದಾಪುರ ಬಿಗ್ ಬಾಸ್‌ನಿಂದ ಒಟ್ಟು 16,50,000 ಪಡೆಯಲಿದ್ದಾರೆ.ಎನ್ನಲಾಗಿದೆ.

ಗಮನಿಸಿ