ಸುದ್ದಿಬಿಂದು ಬ್ಯೂರೋ ವರದಿ
ಹೊಸದಿಲ್ಲಿ: ಕೇಂದ್ರ ಸರ್ಕಾರ ಶುಕ್ರವಾರ ಕರ್ನಾಟಕ ಸರ್ಕಾರಕ್ಕೆ ತೆರಿಗೆ ಹಂಚಿಕೆಯ ಕಂತಾಗಿ ₹6,310.40 ಕೋಟಿ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ 28 ರಾಜ್ಯಗಳಿಗೆ ಒಟ್ಟಾರೆಯಾಗಿ ₹1,73,030 ಕೋಟಿ ಬಿಡುಗಡೆ ಮಾಡಿದೆ.

15ನೇ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ, ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆಯ 41% ಅನ್ನು 14 ಕಂತುಗಳಲ್ಲಿ ರಾಜ್ಯ ಸರ್ಕಾರಗಳಿಗೆ ಹಂಚಿಕೆ ಮಾಡಲಾಗುತ್ತದೆ. 2024ರ ಡಿಸೆಂಬರ್ ತಿಂಗಳ ಕಂತಿನಲ್ಲಿ ₹89,086 ಕೋಟಿ ಬಿಡುಗಡೆ ಮಾಡಲಾಗಿದೆ.

ರಾಜ್ಯಗಳು ಅಭಿವೃದ್ಧಿ ಮತ್ತು ಬಂಡವಾಳ ವೆಚ್ಚಗಳಿಗೆ ಹೆಚ್ಚು ಹಣ ಹೂಡಿಕೆ ಮಾಡಲು ಈ ಕಂತು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಯಾವ ಯಾವ ರಾಜ್ಯಗಳಿಗೆ ಎಷ್ಟು ಹಣ

  1. ಆಂಧ್ರ ಪ್ರದೇಶ – ₹7,002.52 ಕೋಟಿ
  2. ಅರುಣಾಚಲ ಪ್ರದೇಶ – ₹3,040.14 ಕೋಟಿ
  3. ಅಸ್ಸಾಂ – ₹5,412.38 ಕೋಟಿ
  4. ಬಿಹಾರ – ₹17,403.36 ಕೋಟಿ
  5. ಛತ್ತೀಸ್‌ಗಡ – ₹5,895.13 ಕೋಟಿ
  6. ಗೋವಾ – ₹667.91 ಕೋಟಿ
  7. ಗುಜರಾತ್ – ₹6,017.99 ಕೋಟಿ
  8. ಹರಿಯಾಣ – ₹1,891.22 ಕೋಟಿ
  9. ಹಿಮಾಚಲ ಪ್ರದೇಶ – ₹1,436.16 ಕೋಟಿ
  10. ಜಾರ್ಖಂಡ್ – ₹5,722.10 ಕೋಟಿ
  11. ಕರ್ನಾಟಕ – ₹6,310.40 ಕೋಟಿ
  12. ಕೇರಳ – ₹3,330.83 ಕೋಟಿ
  13. ಮಧ್ಯಪ್ರದೇಶ – ₹13,582.86 ಕೋಟಿ
  14. ಮಹಾರಾಷ್ಟ್ರ – ₹10,930.31 ಕೋಟಿ
  15. ಮಣಿಪುರ – ₹1,238.90 ಕೋಟಿ
  16. ಮೇಘಾಲಯ – ₹1,327.13 ಕೋಟಿ
  17. ಮಿಜೋರಾಂ – ₹865.15 ಕೋಟಿ
  18. ನಾಗಾಲ್ಯಾಂಡ್ – ₹984.54 ಕೋಟಿ
  19. ಒಡಿಶಾ – ₹7,834.80 ಕೋಟಿ
  20. ಪಂಜಾಬ್ – ₹3,126.65 ಕೋಟಿ
  21. ರಾಜಸ್ಥಾನ – ₹10,426.78 ಕೋಟಿ
  22. ಸಿಕ್ಕಿಂ – ₹2,671.35 ಕೋಟಿ
  23. ತಮಿಳುನಾಡು – ₹7,057.89 ಕೋಟಿ
  24. ತೆಲಂಗಾಣ – ₹3,637.09 ಕೋಟಿ
  25. ತ್ರಿಪುರಾ – ₹1,225.04 ಕೋಟಿ
  26. ಉತ್ತರ ಪ್ರದೇಶ – ₹31,039.84 ಕೋಟಿ
  27. ಉತ್ತರಾಖಂಡ್ – ₹1,934.47 ಕೋಟಿ
  28. ಪಶ್ಚಿಮ ಬಂಗಾಳ – ₹13,017.06 ಕೋಟಿ.
  29. ಗಮನಿಸಿ