ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ:ಉತ್ತರಕನ್ನಡ ಜಿಲ್ಲೆಯ ಕಾರವಾರದ ನೌಕಾನೆಲೆಯ ಸಿಬ್ಬಂದಿ ಕುಡಿದು ರಸ್ತೆ ಬದಿಯೇ ಅವಾಚ್ಯವಾಗಿ ಬೈದುಕೊಂಡು ನೂಕಾಟ ತಳ್ಳಾಟ ನಡೆಸಿದ ಘಟನೆ ಕಾರವಾರ ನಗರದಲ್ಲಿ ನಡೆದಿದೆ.
ಕಾರವಾರ ನಗರದಲ್ಲಿರುವ ಖಾಸಗಿ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡಿರುವ ನೌಕಾನೆಲೆಯ ಸಿಬ್ಬಂದಿ, ಕುಡಿದ ಮತ್ತಿನಲ್ಲಿ ಯಾವುದೋ ಕಾರಣಕ್ಕೆ ಬೈಯುತ್ತಾ ಕಿತ್ತಾಡಿಕೊಂಡಿದ್ದಾರೆ. ಇತರರಿಗೆ ಆದರ್ಶವಾಗಿರಬೇಕಾಗಿದ್ದ ನೇವಿಯ ಸಿಬ್ಬಂದಿ, ರಸ್ತೆ ಬದಿ ರಂಪಾಟ ನಡೆಸಿದ್ದು,ರೆಸ್ಟೋರೆಂಟ್ ಬಳಿಯೇ ಕಿತ್ತಾಡಿಕೊಳ್ತಿದ್ದ ನೇವಿಯ ಸಿಬ್ಬಂದಿಯ ಜಗಳ ಬಿಡಿಸಲು ಸೆಕ್ಯೂರಿಟಿ ಗಾರ್ಡ್ ಹರಸಾಹಸಪಡಬೇಕಾದ ಸ್ಥಿತಿ ಎದುರಾಯಿತು. ಕೊನೆಗೂ ಬೈದಾಡಿಕೊಂಡು, ನೂಕಾಟ- ತಳ್ಳಾಟ ನಡೆಸಿಕೊಂಡು ನೇವಿಯ ಸಿಬ್ಬಂದಿ ಸ್ಥಳದಿಂದ ತೆರಳಿದ್ದು, ನೇವಿ ಸಿಬ್ಬಂದಿ ಕಿತ್ತಾಡಿಕೊಳ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ…
ಗಮನಿಸಿ
- ಮರಕ್ಕೆ ಡಿಕ್ಕಿ ಹೊಡೆದ ಸಾರಿಗೆ ಬಸ್ : ವಿದ್ಯಾರ್ಥಿಗಳು ಸೇರಿ 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯ
- ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ನೆರವಿನ ಕೈ ಚಾಚುವಂತೆ ಮನವಿ
- ಹೊನ್ನಾವರದಲ್ಲಿ ಭೀಕರ ದುರಂತ: ಕಾರಿಗೆ ಬೆಂಕಿ, ಇಬ್ಬರು ಸಜೀವ ದಹನ
- ವಿವಾಹಕ್ಕೆ ಒಪ್ಪದ ಪ್ರೇಯಸಿ: ಪವನ್ ಭಟ್ ಆತ್ಮಹತ್ಯೆ
- ಚಿನ್ನ ಕಳೆದು ಕಣ್ಣೀರು ಹಾಕಿದ ಮಹಿಳೆ : ಒಂದು ಗಂಟೆಯಲ್ಲಿ ನಗು ತಂದ ಕುಮಟಾ ಪೊಲೀಸರು


