ಸುದ್ದಿಬಿಂದು ಬ್ಯೂರೋ ವರದಿ
Kumta:ಕುಮಟಾ :
ತಾಯಿಯ ಆರೋಗ್ಯ ವಿಚಾರಿಸಿಕೊಂಡು ಬರಲು ತನ್ನ 8ವರ್ಷದ ಮಗಳೊಂದಿಗೆ ತವರು ಮನೆಗೆ ಹೋಗಿದ್ದ‌ ಮಹಿಳೆ ನಾಪತ್ತೆಯಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದಲ್ಲಿ ನಡೆದೆ.

ಹೊನ್ನಮ್ಮ ಮಹಾದೇವ ಬೋವಿ ಹಾಗೂ ಆಕೆಯ 8 ವರ್ಷದ ಮಗು ದೀಪ್ತಿಯೊಂದಿಗೆ ನಾಪತ್ತೆಯಾಗಿದ್ದಾಳೆ.‌ ನಾಪತ್ತೆಯಾಗಿರುವ ಹೊನ್ನಮ್ಮ‌‌‌ ಕುಟುಂಬ ಕುಮಟಾ ಪಟ್ಟಣದಲ್ಲಿ ವಾಸವಾಗಿದ್ದಾರೆ.‌ ಮಹಿಳೆ ಸೊರಬಾ ತಾಲೂಕಿನ ಆನವಟ್ಟಿಯಿಂದ ಡಿಸೆಂಬರ್‌ 02-2024ರಂದು ಕಾಣೆಯಾಗಿದ್ದಾರೆ. ಆನವಟ್ಟಿಯಲ್ಲಿರುವ ಈಕೆಯ ತಾಯಿಗೆ ಆರೋಗ್ಯ ಇರುವ ಕಾರಣ ತಾಯಿಯನ್ನ ಮಾತ್ನಾಡಿಸಿಕೊಂಡು ಬರಲು ಕುಮಟಾದಿಂದ‌ ಮಗಳಾಗಿರುವ ದೀಪ್ತಿಯನ್ನ ಕರೆದುಕೊಂಡು ನವೆಂಬರ್ 30ರಂದು ಕುಮಟಾದಿಂದ ಆನವಟ್ಟಿಗೆ ಹೋಗಿದ್ದಾಳೆ.

ಬಳಿಕ ಅಲ್ಲಿ ಒಂದು ದಿನ ಉಳಿದು ತಾಯಿ ಹಾಗೂ ತಮ್ಮನ‌ ಬಳಿ ಗಂಡನ ಮನೆಗೆ ಕುಮಟಾಕ್ಕೆ ಹೋಗುವುದಾಗಿ ಹೇಳಿ ಅಲ್ಲಿಂದ ಡಿಸೆಂಬರ್ 2ರಂದು ಹೊರಟ್ಟಿದ್ದಾಳೆ. ಆದರೆ ಆಕೆ ಇತ್ತ ಕುಮಟಾದಲ್ಲಿರುವ ಪತಿಯ ಮನೆಗೂ ಬಾರದೆ, ವಾಪಸ್ ತಾಯಿ ಮನೆಗೂ ಹೋಗದೆ ತಾಯಿ ಮಗಳು ಇಬ್ಬರೂ ನಾಪತ್ತೆಯಾಗಿದ್ದಾರೆ.ಆಕೆಯ ಬಳಿ ಇದ್ದ ಮೊಬೈಲ್ ಸಹ ಸ್ವೀಚ್ ಆಪ್ ಆಗಿದೆ. ಎಲ್ಲಾ ಕಡೆ ಹುಡುಕಾಟ ನಡೆಸಿದರು ಪತ್ತೆಯಾಗದೆ ಇರುವ ಕಾರಣ ನಾಪತ್ತೆಯಾಗಿರು ಹೊನ್ನಾಮ್ಮಳ ಸಹೋದ ಇದೀಗ ಸೊರಬಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ನಾಪತ್ತೆಯಾಗಿರುವ ಮಹಿಳೆಯ ಸಹೋದ ಬಂಗಾರಪ್ಪ‌ ಎಂಬುವವರು ಸೊರಬಾ ಪೊಲೀಸ್‌ಠಾಣೆಯಲ್ಲಿ ದೂರು ದಾಖಲಸಿದ್ದಾರೆ. ಪೊಲೀಸರು ಸಹ ಹುಡುಕಾಟ ನಡೆಸಿದ್ದು ಇದುವರೆಗೂ ತಾಯಿ-ಮಗಳು ಇದುವರೆಗೂ ಪತ್ತೆಯಾಗಿಲ್ಲ. ಇಂದು ವೇಳೆ ಈ ಪೊಟೋದಲ್ಲಿ ಕಾಣುತ್ತಿವರ ಇಬ್ಬರೂ ಯಾರಿಗಾದರೂ ಕಂಡು ಬಂದಲ್ಲಿ 8660190941 ಅಥವಾ 9448987965 ಈ ನಂಬರ್‌ಗೆ ಕರೆ ಮಾಡುವಂತೆ ತಿಳಿಸಲಾಗಿದೆ.

ಗಮನಿಸಿ