ಸುದ್ದಿಬಿಂದು ಬ್ಯೂರೋ ವರದಿ
Kumta : ಕುಮಟಾ : ಪಟ್ಟಣದ ಕೆಎಸ್ಆರ್ಟಿಸಿ ಬಸ್ ಡಿಪೋದಲ್ಲಿ ನಿಲ್ಲಿಸಿಡಲಾಗಿದ್ದ Ksrtc ಬಸ್ ಒಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಬಸ್ ಧಗಧಗನೆ ಹೊತ್ತಿ ಉರಿದಿರುವ ಘಟನೆ ರವಿವಾರ ತಡ ರಾತ್ರಿ 2.ಗಂಟೆಗೆ ನಡೆದಿದೆ.
ರವಿವಾರ ಸಂಜೆ ರೂಟ್ ಮುಗಿಸಿ ಬಂದಿದ್ದ ಬಸ್ನ ಡಿಪೋದಲ್ಲಿ ನಿಲ್ಲಿಸಲಾಗಿತ್ತು. ಈ ಬಸ್ ಸೋಮವಾರ ಬೆಳಿಗ್ಗೆ ಇನ್ನೊಂದು ರೂಟ್ಗೆ ಹೊರಡುವುದಿತ್ತು. ಆದರೆ ಸಂಜೆ ಕರ್ತವ್ಯ ಮುಗಿಸಿದ ಚಾಲಕ ಎಂದಿನಂತೆ ಡಿಪೋದಲ್ಲಿ ಬಸ್ ಇಟ್ಟು ಹೋಗಿದ್ದರು.ರಾತ್ರಿ ವೇಳೆ ನಿಲ್ಲಿಸಟ್ಟ ಸ್ಥಳದಲ್ಲಿಯೇ ಬಸ್ಗೆ ಏಕಾಏಕಿಯಾಗಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಂಡಿರುವುದನ್ನ ಗಮನಿಸಿದ ಅಲ್ಲಿನ ಸಿಬ್ಬಂದಿಗಳು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀದ್ದಾರೆ.
ಸ್ಥಳಕ್ಕೆ ಬಂದ ಕುಮಟಾದ ಅಗ್ನಿ ಶಾಮಕ ಸಿಬ್ಬಂದಿಗಳು ಹಾಗೂ ಪೊಲೀಸರು ಬೆಂಕಿ ನಂದಿಸಿದ್ದು,ಸದ್ಯ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಒಂದು ವೇಳೆ ಈ ಬಸ್ಗೆ ಚಲಿಸುವಾಗ ಬೆಂಕಿ ಕಾಣಿಸಿಕೊಂಡಿದ್ದರೆ ದೊಡ್ಡ ಅನಾಹುತ ನಡೆಯುತ್ತಿತ್ತು. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದು, ಬಳಕವಷ್ಟೆ ಬಸ್ಗೆ ಬೆಂಕಿ ಬಿದ್ದಿರುವ ಬಗ್ಗೆ ನಿಖರ ಮಾಹಿತಿ ತಿಳಿದು ಬರಬೇಕಿದೆ..
ಗಮನಿಸಿ
- ಜಿಪಿಎಸ್ ಟ್ರಾಕರ್ ಹೊಂದಿದ ವಲಸೆ ಪಕ್ಷಿ ಪತ್ತೆ – ಪೊಲೀಸ್ರಿಂದ ಮುಂದುವರೆದ ತನಿಖೆ
- ಶಾಸಕ ದಿನಕರ ಶೆಟ್ಟರು ಉಡಾಫೆ ಮಾತನಾಡುವ ಸಂಸ್ಕೃತಿ ಬಿಡಲಿ : ಭುವನ್ ಭಾಗ್ವತ್
- ಜೆ.ಪಿ.ಎನ್.ಪಿ. ವಿದ್ಯಾರ್ಥಿವೇತನ ನಿರಾಕರಣೆ : ಹಿಂಪಡೆಯುವಂತೆ ಉತ್ತರ ಕನ್ನಡ ಜಿಲ್ಲಾ ಘಟಕದಿಂದ ಪ್ರತಿಷ್ಠಾನಕ್ಕೆ ಮನವಿ
- ಕೋಡ್ಕಣಿ ಸರಕಾರಿ ಶಾಲೆಯಲ್ಲಿ ಸಂಭ್ರಮದ ‘ಮಕ್ಕಳ ಸಂತೆ’: ವ್ಯಾಪಾರ ಕೌಶಲ್ಯ ಮೆರೆದ ವಿದ್ಯಾರ್ಥಿಗಳು


