ಸುದ್ದಿಬಿಂದು ಬ್ಯೂರೋ ವರದಿ
ಮಂಗಳೂರು : ಲಕ್ಕಿ ಸ್ಕೀಮ್ ಹೆಸರಲ್ಲಿ ಮಂಗಳೂರು, ಉಡುಪಿಯಲ್ಲಿ ಭಾರೀ ವಂಚನೆ ನಡೆಯುತ್ತಿರುವು ಇದೀಗ ಲೈವ್ ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಆ ವಿಡಿಯೋ ಸಖತ್ ವೈರಲ್ ಆಗತ್ತಿದೆ.

ಉಡುಪಿಯಲ್ಲಿ ಡ್ರೀಮ್ ಡೀಲ್ ಸಂಸ್ಥೆಯ ಡ್ರಾ ಸಂದರ್ಭದಲ್ಲಿ ನಕಲಿ ಮೋಸದಾಟ ಬಯಲಾಗಿದೆ. ಅದೃಷ್ಟ ಚೀಟಿ ಎತ್ತುವುದನ್ನು ಕಣ್ಣಿಗೆ ಬಟ್ಟೆ ಕಟ್ಟಿ ತೋರಿಸುವ ವಿಡಿಯೋ ಸೆರೆಯಾಗಿದ್ದು,ಗ್ರಾಹಕರ ಲಕ್ಕಿ ಚೀಟಿ ಹೆಸರಲ್ಲಿ ತಾವೇ ಹಿಂದಿನಿಂದ ಚೀಟಿ ಎತ್ತಿ ಮೋಸ ಮಾಡುತ್ತಿದ್ದು,ಸಾಮಾಜಿಕ ಜಾಲತಾಣಗಳಲ್ಲಿ ವಂಚನಾ ಜಾಲದ ವಿಡಿಯೋ ವೈರಲ್ ಆಗತ್ತಿದೆ.

ಡ್ರೀಮ್ ಡೀಲ್ ಹೆಸರಲ್ಲಿ ನಕಲಿ ಸ್ಕೀಮ್ ಹೆಸರಿನಲ್ಲಿ ಗ್ರಾಹಕರಿಗೆ ವಂಚನೆ ಮಾಡಲಾಗತ್ತಿದ್ದು, ಮಹಮ್ಮದ್ ಇರ್ಶಾದ್ ಮತ್ತು ಇನ್ನಿತರ ಸ್ನೇಹಿತರು ಸೇರಿ ಲಕ್ಕಿ ಡ್ರಾ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದಾರೆ.ತಿಂಗಳಿಗೆ ಒಂದು ಸಾವಿರ ಕಟ್ಟಿದರೆ ಫ್ಲಾಟ್, ಕಾರು, ಬೈಕ್ ಗೆಲ್ಲುವ ಅವಕಾಶ ಇದೆ ಎಂದು ಜನರಿಗೆ ಆಸೆ ತೋರಿಸಿ ಹಣ ವಸೂಲಿ ಮಾಡಿ ಪ್ರತಿ ತಿಂಗಳು ಜನರಿಂದ ಒಂದು ಸಾವಿರ ಕಟ್ಟಿಸಿಕೊಂಡು ಟೋಪಿ ಹಾಕುವ ಕೆಲಸ ಮಾಡುತ್ತಿದ್ದು,ಮಂಗಳೂರಿನಲ್ಲಿ 20ಕ್ಕೂ ಇಂಥ ನಕಲಿ ಸ್ಕೀಮ್‌ಗಳು ಹುಟ್ಟಿಕೊಂಡಿದೆ..

ಗಮನಿಸಿ