ಸುದ್ದಿಬಿಂದು ಬ್ಯೂರೋ ವರದಿ(suddibindu digital news)
ಕಾರವಾರ: ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಇಂದು ಮಧ್ಯಾಹ್ನದಿಂದ ಗುಡುಗು ಸಹಿತ ಮಳೆಯಾಗುತ್ತಿದ್ದು, ಮುಂದಿನ 48ಗಂಟೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಸೇರಿ 15ಜಿಲ್ಲೆಯಲ್ಲಿ ಗುಡುಗು,ಸಿಡಲು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ.
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಇಂದು ಸಿಡಿಲು ಬಡಿದು ಬಿಹಾರ ಮೂಲದ ನಾಲ್ವರು ಗಾಯಗೊಂಡಿದ್ದು, ಮಧ್ಯಾಹ್ನದಿಂದ ಗುಡುಗು ಸಹಿತ ಮಳೆಯಾಗುತ್ತಿದೆ. ಕಳೆದ ಕೆಲ ದಿನಗಳಿಂದ ಸಂಪೂರ್ಣವಾಗಿ ಮಳೆ ತಣ್ಣಗಾಗಿರುವ ಕಾರಣ ಜಿಲ್ಲೆಯ ಕರಾವಳಿ ಸೇರಿದಂತೆ ಅನೇಕ ಕಡೆಯಲ್ಲಿನ ರೈತರು ಭತ್ತದ ಪೈರು ಕಟಾವು ಮಾಡಿದ್ದು, ಅಕಾಲಿಕ ಮಳೆಯಿಂದಾಗಿ ಕಟಾವು ಮಾಡಲಾಗಿದ್ದ ಭತ್ತದ ಪೈರು ಇದೀಗ ಮಳೆಯಲ್ಲಿ ಸಿಲುಕಿದ್ದು, ರೈತರು ಕಂಗಾಲಾಗಿದ್ದಾರೆ.
ಇನ್ನೂ ಮುಂದಿನ 48ಗಂಟೆಯಲ್ಲಿ ರಾಜ್ಯದ ಉಡುಪಿ, , ದಕ್ಷಿಣ ಕನ್ನಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, , ಯಾದಗಿರಿ, ಧಾರವಾಡ, ಹಾವೇರಿ, ಕೊಪ್ಪಳ, ಬೀದರ್, ಕೊಪ್ಪಳ, ಕಲಬುರಗಿ, ಬೀದರ್, ರಾಯಚೂರು ಜಿಲ್ಲೆಗಳಲ್ಲಿ ಗುಡುಗು ಸಿಡಿಲಿನೊಂದಿಗೆ ಭಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ
ಗಮನಿಸಿ