ಸುದ್ದಿಬಿಂದು ಬಿಂದು ಬ್ಯೂರೋ
ಗೋಕರ್ಣ: ಕಸವಿಲೇವಾರಿ ಸಮಸ್ಯೆಗೆ ಮುಕ್ತಿ ಹಾಡುವ ನಿಟ್ಟಿನಲ್ಲಿ ದಕ್ಷಿಣಕಾಶಿ ಗೋಕರ್ಣ ಪಂಚಾಯತ್ ವ್ಯಾಪ್ತಿಯಲ್ಲಿ 70ಲಕ್ಷ ರೂಪಾಯಿ ವಿಶೇಷ ಅನುದಾನ ನಿರ್ಮಿಸಲಾದ ಕಸವಿಲೇವಾರಿ ಘಟಕ  ನಿರ್ಮಾಣವಾದರೂ ಬೇಕಾಬಿಟ್ಟಿ ಕಸ ಎಸೆಯುವ ಮೂಲಕ ಸರಕಾರದ ಹಣವನ್ನ ಕಸದ ರಾಶಿಯಲ್ಲಿ ಎಸೆದಂತಾಗಿದೆ..

ಗೋಕರ್ಣ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಹಾಗೂ ಹೊಟೋಲ್‌ಗಳಿಂದ ಸಂಗ್ರಹಿಸಲಾಗಿದ್ದ ಕಸವನ್ನ ಅಶೋಕೆಯಲ್ಲಿನ ಬಯಲು ಪ್ರದೇಶದಲ್ಲಿ ಬೇಕಾಬಿಟ್ಟಿಯಾಗಿ ಎಸೆಯಲಾಗುತ್ತಿತ್ತು. ಇದರಿಂದ ಪರಿಸರ ಕೂಡ ಕಲುಷಿತವಾಗುತ್ತಿರುವುದಲ್ಲದೆ. ಸುತ್ತಮುತ್ತಲಿನ ಕುಡಿಯುವ ನೀರಿನ ಬಾವಿಗಳು ಕಲುಷಿತಗೊಳ್ಳುವುದಷ್ಟೆ ಅಲ್ಲದೆ.‌ಜಾನುವಾರುಗಳು ಸಹ ಬಿಸಾಕಿದ ಪ್ಲಾಸ್ಟಿಕ್ ತಿಂದು ಪ್ರಾಣ ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗಿತ್ತು. ನಂತರದಲ್ಲಿ ಇಲ್ಲಿ ಕಸ ಎಸೆಯಂತೆ ಸಾರ್ವಜನಿಕರು ವಿರೋಧ ಸಹ ಮಾಡಿದ್ದರು, ಆದರೂ ಕಸ ಎಸೆಯುವುದು ನಿಂತಿರಲ್ಲ.

ಈ ಬಗ್ಗೆ ಸ್ಥಳೀಯರು ದೊಡ್ಡಮಟ್ಟದಲ್ಲಿ ಹೋರಾಟವನ್ನ ಕೂಡ ಮಾಡಿ ಈ ಭಾಗದಲ್ಲಿ ಕಸವಿಲೇವಾರಿ ಘಟಕ ನಿರ್ಮಾಣ ಮಾಡದಂತೆ ಪಟ್ಟು ಹಿಡಿದಿದ್ದು, ಹೋರಾಟದ ಫಲವಾಗಿ ಅದೆ ಸ್ಥಳದಲ್ಲೇ ಸುಮಾರು 70ಲಕ್ಷ ವಿಶೇಷ ಅನುದಾನದಲ್ಲಿ ಘಟಕ ಸ್ಥಾಪನೆಗೆ ಸಹ ಮುಂದಾಗಲಾಗಿತ್ತು. ಆಗಲು ಸಹ ಸಾರ್ವಜನಿಕರು ಬೇರೆಡೆ ಘಟಕ ಸ್ಘಾಪನೆ ನಿರ್ಮಾಣ ಮಾಡುವಂತೆ ಕೂಡ ಹೋರಾಟ ನಡೆಸಿದ್ದರೂ. ಆದರೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಸಾರ್ವಜನಿಕರ ವಿರೋಧದ ನಡುವೆ ಸಹ ಅದೆ ಸ್ಥಳದಲ್ಲಿ ಕಸವಿಲೇವಾರಿ ಘಟಕವನ್ನ ನಿರ್ಮಾಣ ಮಾಡಿದ್ದಾರೆ.

ಬಳಿಕ 70 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಗುತ್ತಿಗೆ  ಪಡೆದ ಗುತ್ತಿಗೆದಾರರು ಕಾಮಗಾರಿಯನ್ನ ಆರಂಭಿಸಿ ಅದನ್ನ ಪೂರ್ಣಗೊಳಿಸದೆ ಕಾಮಗಾರಿಗಾಗಿ ಮಂಜೂರಾದ 70ಲಕ್ಷ ಹಣವನ್ನ ಸಮರ್ಪಕವಾಗಿ ಖರ್ಚುಮಾಡದೆ ಅರ್ಧಕ್ಕೆ ಕಾಮಗಾರಿ ಮುಗಿಸಿ ಕೈ ತೊಳೆದುಕೊಂಡಿದ್ದಾರೆಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಇನ್ನೂ ಗ್ರಾಮ ಪಂಚಾಯತದಿಂದ ಸಂಗ್ರಹಿಸಲಾಗುತ್ತಿರುವ ಕಸವನ್ನ ಈ ಹಿಂದೆ ಎಸೆಯಲಾಗುತ್ತಿದ್ದ ಬಯಲು ಪ್ರದೇಶದಲ್ಲೇ ಎಸೆಯಲಾಗುತ್ತಿದ್ದು, ದುರ್ನಾತ ಬಿರುತ್ತಿರುವುದರ ಜೊತಗೆ ಆ ಭಾಗದ ಸುತ್ತಮುತ್ತಲಿನ ಕುಡಿಯುವ ನೀರಿನ ಬಾವಿಗಳ ನೀರು ಸಹ ಕಲುಷಿತವಾಗುತ್ತಿದ್ದು, ಜನ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ಸ್ಥಳೀಯರು ಅನೇಕ ಭಾರಿ ಗ್ರಾಮ ಪಂಚಾಯತ ಗ್ರಾಮ ಸಭೆಯಲ್ಲಿ ಪ್ರಶ್ನೆ ಮಾಡುತ್ತಲೇ ಬಂದಿದ್ದು, ಸಮಸ್ಯೆಗೆ ಇದುವರಗೆ ಪರಿಹಾರ ಸಿಗದಂತಾಗಿದೆ.ಹೀಗಾಗಿ ನಿತ್ಯವೂ ಸ್ಥಳೀಯರು ಕಸವಿಲೇವಾರಿ ಘಟಕದ ದುರ್ವಾಸನೆಯಲ್ಲಿ ಕಾಲ ಕಳೆಯು ಪರಿಸ್ಥಿತಿ ಒಂದು ಕಡೆಯಾದರೆ. ನೂರಾರು ಜಾನುವಾರುಗಳು ಇಲ್ಲಿ ಬಿಸಾಕುವ ಪ್ಲಾಸ್ಟಿಕ್ ವಸ್ತುಗಳನ್ನ ತಿಂದು ಸಾಯುವಂತಾಗಿದೆ. ಇದರಿಂದಾಗಿ ರೈತರ ಕೊಟ್ಟಿಗೆಯಲ್ಲಿದ್ದ ಜಾನುವಾರುಗಳ ಸಂಖ್ಯೆ ಸಹ ಕಡಿಮೆಯಾಗುವಂತಾಗಿದೆ.ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕಸವಿಲೇವಾರಿ ಘಟಕ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳದೆ ಹೋದರೆ ಇನ್ನೂ ಕೆಲ ದಿನದಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭನೆ ನಡೆಸಲು ಸಜ್ಜಾಗಿದ್ದಾರೆ.

ಪ್ರವಾಸಿಗರ ಗೋಳು ಕೇಳೋರು ಯಾರು..?
ಪ್ರತಿನಿತ್ಯವೂ ಸಹ ರಾಜ್ಯ ಸೇರಿದಂತೆ ಹೊರ ರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿ ಸುದಂರ ಕಡಲತೀರ ಹಾಗೂ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಯಾರೆ ಇಲ್ಲಿನ ದೇವಸ್ಥಾನಕ್ಕೆ ಬಂದರು ಇಲ್ಲರುವ ಪ್ರಮುಖ ಬೀಚಗಳಿಗೆ ಭೇಟಿ ನೀಡದೆ ವಾಪಸ್ ಹೋಗುವುದು ತುಂಬಾ ವಿರಳ. ಹೀಗಾಗಿ ಕಡಲ‌ತೀರಕ್ಕೆ ಹೋಗಿ ಬರುವ ಪ್ರವಾಸಿಗರು ಸಹ ಈ ದುರ್ನಾತವನ್ನ ಪಡೆದೆ ಮುಂದೆ ಸಾಗಬೇಕಾದ‌ ಪರಿಸ್ಥಿತಿ ವಿದೇಶ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಗೋಕರ್ಣದಲ್ಲಿ ನಿರ್ಮಾಣವಾಗಿರುವುದು ಮಾತ್ರ ದುರಂತ..