suddibindu.in
ಕಾರವಾರ: ನಗರದ ವಿಜಯನಗರದ (ಖುರ್ಸವಾಡ) ರಸ್ತೆ ಬದಿ ನವಜಾತ ಶಿಶು ಪತ್ತೆಯಾಗಿದ್ದು 108 ಸಿಬ್ಬಂದಿಯಿಂದ ರಕ್ಷಣೆ ಮಾಡಲಾಗಿದೆ.
ರಸ್ತೆಯ ಬದಿಯ ಹಳೆಯ ಕಟ್ಟಡವಿಂದ ಬಳಿ ಮರಗಿಡಗಳ ಸಂದಿಯಲ್ಲಿ ಶಿಶು ಪತ್ತೆಯಾಗಿದೆ. ಮಗುವನ್ನು ಗಮನಿಸಿದ ಸ್ಥಳೀಯರು 108 ತುರ್ತುಸೇವೆ ಸಿಬ್ಬಂದಿಗೆ ತಿಳಿಸಿದ್ದಾರೆ. ಬಳಿಕ ಸಮಸಯಕ್ಕೆ ಸರಿಯಾಗಿ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಶಿಶುವನ್ನು ರಕ್ಷಿಸಿದ್ದಾರೆ. ಸದ್ಯ ನವಜಾತ ಶಿಶುವಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸದ್ಯ ಮಗುವನ್ನ ಐಸಿಯುವಿ(ICU)ನಲ್ಲಿ ಇಡಲಾಗಿದ್ದು ವೈದ್ಯರು ನಿಗಾ ವಹಿಸಿದ್ದಾರೆ. ಮಗುವಿನ ತಾಯಿಯ ಹುಡುಕಾಟವನ್ನು ಪೊಲೀಸರು ನಡೆಸಿದ್ದಾರೆ. ಕಾರವಾರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ