suddibindu.in
Kumta:ಕುಮಟಾ : ನೀರಿನ ಬಾಟಲ್ ಸಾಗಿಸುತ್ತಿದ್ದ ವಾಹನವೊಂದು ಹೆದ್ದಾರಿ ಪಕ್ಕದಲ್ಲಿ ಪಲ್ಟಿಯಾಗಿ ವಾಹನ ಚಾಲಕ ಹಾಗೂ ಇಬ್ಬರೂ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಿರ್ಜಾನ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಗೋಕರ್ಣದ ಓಯಸಿಸ್ ವಾಟರ್ ಬಾಟಲ್ ಕಂಪನಿಗೆ ಸೇರಿದ ವಾಹನ ಇದಾಗಿದೆ ಎನ್ನಲಾಗಿದೆ. ಬೆಳಿಗ್ಗೆ ಗೋಕರ್ಣದಿಂದ ಹೊರಟ ಈ ವಾಹನ ಕುಮಟಾ ಭಾಗದಲ್ಲಿ ವಾಟರ್ ಬಾಟಲ್ ಖಾಲಿ ಮಾಡಿ ವಾಪಸ್ ಗೋಕರ್ಣಕ್ಕೆ ತೆರಳುತ್ತಿದ್ದ ವೇಳೆ ಮಿರ್ಜಾನ ಬಳಿ ಹಳೆಯ ಕಟ್ಟಿಗೆ ಡಿಪೋ ಬಳಿ ವಾಹನ ಪಲ್ಲಿಯಾಗಿದೆ.
ವಾಹನಲ್ಲಿ ಚಾಲಕ ಧನಂಜ್ ಹೊನ್ನಪ್ಪ ಹಳ್ಳೇರ ಹಾಗೂ ಇನ್ನೂ ಇಬ್ಬರೂ ಕಾರ್ಮಿಕರು ಇದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ