suddibindu.in
Ankola: ಅಂಕೋಲಾ: ತಾಲೂಕಿನ ಹಟ್ಟಿಕೇರಿಯ ಜೇಸೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ರಾಧಾಬಾಯಿ ಅಚ್ಯುತ್ ಕಾಮತ್ ಕೆ.ಜಿ ಸ್ಕೂಲ್ ಹಾಗೂ ಜೇಸೀ ಬಾಲವನ ಪೂರ್ವ ಪ್ರಾಥಮಿಕ ಶಾಲೆ ಅಂಕೋಲಾ ವಿದ್ಯಾರ್ಥಿಗಳಿಂದ ಮುದ್ದು ಕೃಷ್ಣ ಹಾಗೂ ರಾಧೆಯ ಸ್ಪರ್ಧೆ ನಡೆಯಿತು…
ವೇದಿಕೆ ಕಾರ್ಯಾಕ್ರಮವನ್ನ ಪತ್ರಕರ್ತ ದರ್ಶನ್ ನಾಯ್ಕ್ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು “ಗ್ರಾಮೀಣ ಭಾಗದಲ್ಲಿ ತಲೆ ಎತ್ತಿ ನಿಂತಿರುವ ಜೇಸೀ ಶಾಲೆ ಮಕ್ಕಳಿಗೆ ಭಾರತೀಯ ಸಂಸ್ಕ್ರತಿ ಹಾಗೂ ಹಳ್ಳಿ ಸೊಗಡನ್ನು ಪರಿಚಯಿಸುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ..ವಿವಿಧ ಚಟುವಟಿಕೆಯಿಂದ ಕೂಡಿದ ಕಲಿಕೆಗೆ ಜೇಸೀ ಶಾಲೆ ಮಾದರಿಯಾಗಿದೆ” ಎಂದರು.
ಇದನ್ನೂ ಓದಿ
- Teacher suspended/ವಿದ್ಯಾರ್ಥಿಗೆ ಥಳಿಸಿದ ಪ್ರಕರಣ : ಶಿಕ್ಷಕಿ ಅಮಾನತು.
- Varamahalakshmi Festival, ಶ್ರಾವಣದ ಶುಕ್ರವಾರ, ಮನೆ ಮನೆಗಳಲ್ಲಿ ವರಮಹಾಲಕ್ಷ್ಮಿ ಭಕ್ತಿ ಸಡಗರ
- Teacher/ಪಾಠ ಕಲಿಯಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗೆ ಥಳಿತ : ಬಾಸುಂಡೆ ಮೂಡಿಸಿದ ಶಿಕ್ಷಕಿ
ಪ್ರಾಥಮಿಕ ಶಾಲಾ ಮುಖ್ಯಾಧ್ಯಾಪಕ ರಾಘವೇಂದ್ರ ಭಟ್ ಪ್ರಾಸ್ತಾವಿಕ ಮಾತನಾಡಿ ” ನಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ನಾಳೆಗಾಗಿ ಇಂದಿನಿಂದಲೇ ಹೆಜ್ಜೆಯಿಡೋಣ. ಅದಕ್ಕೆ ಪಾಲಕರ ಸಹಕಾರ ಅತ್ಯಗತ್ಯವಾಗಿದೆ” ಎಂದರು.
ಹೈಸ್ಕೂಲ್ ವಿಭಾಗದ ಮುಖ್ಯಾಧ್ಯಾಪಕಿ ಮಂಜುಳಾ ನಾಯ್ಕ, ಅತಿಥಿಗಳಾದ ಶ್ವೇತಾ ದರ್ಶನ್ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಧಾಬಾಯಿ ಕೆ.ಜಿ ಸ್ಕೂಲಿನ ಮುಖ್ಯಾಧ್ಯಾಪಕಿ ಶಿಲ್ಪಾ ನಾಯ್ಕ ಸ್ವಾಗತಿಸಿ ಪರಿಚಯಿಸಿದರು. ಶಿಕ್ಷಕಿ ರಶಿಕಾ ಕೇಣಿ ನಿರೂಪಿಸಿದರು. ಜೇಸೀ ಬಾಲವನ ಶಾಲೆಯ ಮುಖ್ಯಾಧ್ಯಾಪಕಿ ಅಶ್ವಿನಿ ನಾಯ್ಕ ವಂದಿಸಿದರು.
ಪ್ರತಿಕ್ಷಾ ಎಚ್. ಹಾಗೂ ಅಶ್ವಿನಿ ನಾಯ್ಕ ನೀರ್ಣಾಯಕರಾಗಿ ಆಗಮಿಸಿದ್ದರು. ಶಿಕ್ಷಕರಾದ ಮಂಜುನಾಥ ಶೆಡಗೇರಿ, ಬಿಂದು, ಮುಕ್ತಾ ನಾಯ್ಕ, ಶೃದ್ಧಾ ನಾಯ್ಕ, ನಾಗರತ್ನಾ ನಾಯ್ಕ, ಸೌಂದರ್ಯ ಅತ್ತರವಾಲಾ, ಅನುಜಾ ನಾಯ್ಕ, ಲಕ್ಷ್ಮೇಶ್ವರ, ಕಸ್ತೂರಿ, ಸತೀಶ ನಾಯ್ಕ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.. ವೇದಿಕೆಯಲ್ಲಿ ಸುಮಾರು 50 ಕ್ಕಿಂತ ಹೆಚ್ಚು ಪುಟಾಣಿಗಳು ಕೃಷ್ಣ ರಾಧೆಯರ ವೇಷ ತೊಟ್ಟು ಸ್ಪರ್ಧೆಯಲ್ಲಿ ಗಮನ ಸೆಳೆದರು.