suddibindu in
Kumta : ಕುಮಟಾ : ಅಂಕೋಲಾ ತಾಲೂಕಿನ ಶಿರೂರು ಗುಡ್ಡಕುಸಿತದ ಆತಂಕ ದೂರವಾಗುವ ಮುನ್ನವೆ ಇದೀಗ ಕುಮಟಾ ತಾಲೂಕಿನ ಬರ್ಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಕುರಿಗದ್ದೆಯ ಜನವಸತಿ ಪ್ರದೇಶದ ಸಮೀಪದ ಗುಡ್ಡದಲ್ಲಿ ಭಾರೀ ಪ್ರಮಾಣದ ಬಿರುಕು ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ.
ಬರ್ಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಕುರಿಗದ್ದೆ ಗ್ರಾಮದ ಕೃಷ್ಣಪ್ಪ ರಾಮಯ್ಯ ಪಟಗಾರ ಎಂಬುವವರ ಮನೆ ಸಮೀಪದಲ್ಲಿರುವ ಅರಣ್ಯ ಪ್ರದೇಶದಲ್ಲಿ ಸುಮಾರು ಅರ್ಧ ಕಿಲೋಮೀಟರ್ ಆಗುವಷ್ಟು ಜಾಗದಲ್ಲಿ ಭಾರೀ ಪ್ರಮಾಣದಲ್ಲಿ ಭೂಮಿ ಬಾಯ್ ತೆರೆದುಕೊಂಡಿದೆ.ಅಲ್ಲಿನ ಪರಿಸ್ಥಿತಿಯನ್ನ ನೋಡಿದರೆ ಯಾವುದೇ ಕ್ಷಣದಲ್ಲಾದ್ದರು ಸಹ ಗುಡ್ಡ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ. ನಿನ್ನೆ ರಾತ್ರಿಯಿಂದ ಮಳೆ ಸಹ ಜೋರಾಗಿದ್ದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ..
ಇದನ್ನೂ ಓದಿ
- ದರ್ಶನ್ ಡೆವಿಲ್ ಹೊಸ ದಾಖಲೆ, ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತೇ?
- ಹೊನ್ನಾವರದ ಖಾಸಗಿ ಬಸ್ ಚಾಲಕನ ರಾಸಲೀಲೆ : ಇನ್ಸ್ಟಾದಲ್ಲಿ ಪೊಟೋ ಅಪ್ಲೋಡ್..!
- ಮಹಿಳೆಯ ಕಣ್ಣೀರಿಗೆ ನ್ಯಾಯ : ವಿಕೃತ ಕಾಮಿ ಉಲ್ಲಾಸಗೆ 10ವರ್ಷ ಜೈಲು ಶಿಕ್ಷೆ
ಈಗಾಗಲೇ ಗುಡ್ಡಬಿರುಕು ಬಿಟ್ಟಿರುವ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಸಹ ನಡೆಸಿದ್ದು, ಗುಡ್ಡಕುಸಿಯುವ ಆತಂಕ ಇರುವ ಕಾರಣ ಮನೆಯಲ್ಲಿ ವಾಸ್ತವ್ಯ ಮಾಡದಂತೆ ಸಹ ಸೂಚನೆ ನೀಡಿದ್ದಾರೆ.





