suddibindu.in
ಅಂಕೋಲಾ: ವಾಯುಭಾರ ಕುಸಿತದಿಂದ ಅರಬ್ಬೀ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ಭಾರೀ ಅಲೆಗಳ ಅಬ್ಬರಕ್ಕೆ ಅಂಕೋಲಾ ತಾಲೂಕಿನ ಹಾರವಾರದ ತರಂಗಮೇಟ ಪ್ರದೇಶದಲ್ಲಿ ಅಲೆಯ ರಭಸಕ್ಕೆ ಮನೆ ಕೊಚ್ಚಿಹೋಗಿದ್ದು, ಆ ದೃಶ್ಯಾವಳಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹಾರವಾಡದ ತರಂಗಮೇಟ ನಿವಾಸಿಯಾಗಿರುವ ಅಶೋಕ್ ಹರಿಕಂತ್ರ ಎಂಬುವವರ ಮನೆಗೆ ಭಾರೀ ಗಾತ್ರದ ಅಲೆ ಅಪ್ಪಳಿಸಿದ ಪರಿಣಾಮ ಮನೆ ಸಂಪೂರ್ಣವಾಗಿ ಸಮುದ್ರಪಾಲಾಗಿದೆ. ಸಮುದ್ರದಲ್ಲಿ ಕಳೆದ ಎರಡು ತಿಂಗಳಿಂದ ಉಂಟಾಗುತ್ತಿದ್ದ ಕಡಲಕೊರೆತ ಉಂಟಾಗುತ್ತಲೆ ಇದೆ. ಈ ಕಾರಣಕ್ಕೆ ಅಶೋಕ ಹರಿಕಾಂತ ಕುಟುಂಬದವರು ಬೇರೆ ಕಡೆ ವಾಸವಾಗಿದ್ದರು.ಹೀಗಾಗಿ ಭಾರೀ ದೊಡ್ಡ ದುರಂತ ತಪ್ಪಿದೆ.ತರಂಗಮೇಟ ತೀರದ ಸುಮಾರು 200 ಮೀಟರ್ ವ್ಯಾಪ್ತಿಯಲ್ಲಿ ಕಡಲಕೊರೆತ ಉಂಟಾಗುತ್ತಲೆ ಇದೆ.
ಇದನ್ನೂ ಓದಿ
- ಗೋ ಕಳ್ಳತನ ಪ್ರಕರಣ ಬಯಲು: ಭಟ್ಕಳದಲ್ಲಿ ಇಬ್ಬರು ಆರೋಪಿ ಬಂಧನ

- ಗೋ ಕಳ್ಳತನ ಪ್ರಕರಣ ಬಯಲು: ಭಟ್ಕಳದಲ್ಲಿ ಇಬ್ಬರು ಆರೋಪಿ ಬಂಧನ

- ಸಿಎಂ ಪತ್ನಿ ಪಾರ್ವತಿ ಆರೋಗ್ಯದಲ್ಲಿ ಏರುಪೇರು; ಶೇಷಾದ್ರಿಪುರಂ ಖಾಸಗಿ ಆಸ್ಪತ್ರೆಗೆ ದಾಖಲು

ಇಂದು ಸಹ ಭಾರೀ ಪ್ರಮಾಣದಲ್ಲಿ ಅಲೆಗಳು ಅಪ್ಪಳಿಸಿದ ಪರಿಣಾಮ ಮನೆ, ತೆಂಗಿನಮರ ನೀರುಪಾಲಾಗಿದೆ.ಮನೆ, ತೆಂಗಿನಮರ ಕೊಚ್ಚಿಹೋಗುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನೂ ತರಂಗಮೇಟ ಕಡಲತೀರಕ್ಕೆ ಹೊಂದಿಕೊಂಡಿರುವ 30ಕ್ಕೂ ಅಧಿಕ ಮೀನುಗಾರರ ಮನೆಗಳಿಗೂ ಅಪಾಯ ಉಂಟಾಗು ಸಾಧ್ಯತೆ ಇದೆ.
ಕಡಲತೀರಕ್ಕೆ ಅಲೆತಡೆಗೋಡೆ ನಿರ್ಮಿಸುವಂತೆ ಸ್ಥಳೀಯರು ಈ ಹಿಂದಿನಿಂದಲ್ಲೂ ಮನವಿ ಮಾಡಿದ್ದಾರೆ.ಇನ್ನೂ ಶಿರೂರು ಗುಡ್ಡಕುಸಿತವಾದ ವೇಳೆ ಜಿಲ್ಲೆಗೆ ಆಗಮಿಸಿದ ಸಿ ಎಂ ಸಿದ್ದರಾಮಯ್ಯ ಅವರನ್ನ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದ ಸ್ಥಳೀಯ ಶಾಸಕ ಸತೀಶ ಸೈಲ್ ಪರಿಸ್ಥಿತಿ ಬಗ್ಗೆ ಸಿಎಂ ಗಮನ ಕೂಡ ಸೆಳೆದಿದ್ದರು. ಸಿ ಎಂ ಸಹ ತಡೆಗೋಡೆ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು ಸಹ ಮಳೆ ಇರುವ ಕಾರಣ ಕಾಮಗಾರಿ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಕಡಲ ಅಲೆ ಜೋರಾಗಿರುವ ಕಾರಣ ತರಂಗಮೇಟ ನಿವಾಸಿಗಳು ಆತಂಕದಲ್ಲೇ ಕಾಲಕಳೆಯಬೇಕಿದೆ.



