suddibindu.in
ಕಾರವಾರ : ಹೃದಯಾಘಾತದಿಂದ ನಿಧನರಾಗಿರುವ ಮೀನುಗಾರ ಮುಖಂಡ ರಾಜು ತಾಂಡೇಲ ಅವರು ತಡ ರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹಾಗೂ ಕಾರವಾರ ಕ್ಷೇತ್ರದ ಶಾಸಕ ಸತೀಶ ಸೈಲ್ ಸಂತಾಪ ಸೂಚಿಸಿದ್ದಾರೆ.
ಅವರ ನಿಧನದ ಸುದ್ದಿ ಕೇಳಿ ನೋವಾಯಿತು. ರಾಜು ತಾಂಡೇಲ ಅವರು ಎಲ್ಲರೊಂದಿಗೂ ತುಂಬಾ ಪ್ರೀತಿಯಿಂದ ಇದ್ದವರಾಗಿದ್ದರು. ಅವರು ತುಂಬಾ ಬಡತನದಲ್ಲಿ ಕಷ್ಟಪಟ್ಟು ಬೆಳದು ಬಂದವರಾಗಿದ್ದರು.ಮೀನುಗಾರರ ಸಮಸ್ಯೆಗೆ ಗಟ್ಟಿ ಧ್ವನಿಯಾಗಿದ್ದರು. ಮೀನುಮಾರಾಟ ಫೇಡರೇಷನ ಅಧ್ಯಕ್ಷರಾಗಿ ಸರಕಾರದ ಮೂಲಕ ಮೀನುಗಾರರ ಸಮಸ್ಯೆಗೆ ಸ್ಪಂಧಿಸುವ ಕೆಲಸ ಮಾಡುತ್ತಿದ್ದರು..
ಇದನ್ನೂ ಓದಿ
- ರಾಜ್ಯವನ್ನೆ ಬೆಚ್ಚಿಬೀಳಿಸಿದ ದುರಂತ: ಐಎಎಸ್ ಬಿಳಗಿ ಸೇರಿ ಮೂವರು ಸ್ಥಳದಲ್ಲೇ ಸಾವು
- ಅಂಕೋಲಾ-ಯಲ್ಲಾಪುರ ಹೆದ್ದಾರಿಯಲ್ಲಿ KSRTC ಬಸ್ ಪಲ್ಟಿ
- ಗರ್ಭಿಣಿ ಶ್ವಾನಕ್ಕೆ ಸಂಪ್ರದಾಯದ ಸೀಮಂತ : ಶಿಗ್ಲಿ ಮನೆಯ ವಿಶೇಷ ಪ್ರೀತಿ
ಯಾವುದೇ ವಿಚಾರ ಇದ್ದರೂ ನಮ್ಮೊಂದಿಗೆ ಚರ್ಚಿಸುತ್ತಿದ್ದರು.ಮೀನುಗಾರರ ಸಮಸ್ಯೆಗೆ ಸ್ಪಂಧಿಸುವ ಮೂಲಕ ಬಡವರ ಕಷ್ಟಕ್ಕೆ ಸದಾ ನೆರವಾಗುತ್ತಿದ್ದ ವ್ಯಕ್ತ ರಾಜು ತಾಂಡೇಲ ಅವರಾಗಿದ್ದರು ಆದರೆ ಆರೋಗ್ಯವಾಗಿ ಇದ್ದ ಅವರು ದಿಢೀರ್ ಹೃದಯಾಘಾತದಿಂದ ನಿಧರಾಗಿದ್ದಾರೆ. ಅವರು ನಮ್ಮೆಲ್ಲರನ್ನ ಅಗಲಿರುವುದು ದುಃಖದ ಸಂಗತಿ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಮೀನುಗಾರಿಕಾ, ಬಂದರು ಸಚಿವ ಮಂಕಾಳು ವೈದ್ಯ ಹಾಗೂ ಕಾರವಾರ ಶಾಸಕ ಸತೀಶ ಸೈಲ್ ಸಂತಾಪ ಸೂಚಿಸಿದ್ದಾರೆ.







