suddibindu.in
Karwar : ಕಾರವಾರ: ಮೀನುಗಾರರ ಮುಖಂಡ ಹಾಗೂ ಚಿತ್ತಾಕುಲ ಗ್ರಾಮ ಪಂಚಾಯತ ಅಧ್ಯಕ್ಷರಾಗಿದ್ದ ರಾಜು ತಾಂಡೇಲ(Raju Tandela) ಅವರು ತಡ ರಾತ್ರಿ ಹೃದಯಾಘಾತದಿಂದ (heart attack)ನಿಧನರಾಗಿದ್ದಾರೆ.
ಮೃತ ರಾಜು ತಾಂಡೇಲ ಅವರಿಗೆ 54ವಯಸ್ಸಾಗಿದ್ದು, ಅವರು ಉತ್ತರಕನ್ನಡ ಜಿಲ್ಲೆಯ ಮೀನುಮಾರಾಟ ಫೆಡರೇಷನ್ ಅಧ್ಯಕ್ಷರಾಗಿ (President of Fish Market Federation) ಕಾರ್ಯನಿರ್ವಹಿಸುತ್ತಿದ್ದರು ಇನ್ನೂ ಅದರ ಜೊತೆಗೆ ವಿವಿಧ ಸಂಘ ಸಂಸ್ಥೆಗಳಲ್ಲಿಯೂ ಸಹ ಗುರುತಿಸಿಕೊಂಡಿದ್ದರು.ಅಷ್ಟೆ ಅಲ್ಲದೆ ಕಾರವಾರ ವಿಧಾನಸಭಾ ಕ್ಷೇತ್ರದ ರಾಜಕೀಯದಲ್ಲಿಯೂ ಸಾಕಷ್ಟು ಪ್ರಭಾವ ಇರಿಸಿಕೊಂಡಿದ್ದರು.ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿನಲ್ಲಿ ಮುಚ್ಚುಣಿಯಲ್ಲಿ ಇರುತ್ತಿದರು.
ಇದನ್ನೂ ಓದಿ
- ಅಕ್ರಮ ದಂಧೆಕೋರರರ ಪರ ನಿಂತ ಕನ್ನಡ ಪರ ಸಂಘಟನೆ ಅಧ್ಯಕ್ಷ : PSI ಎತ್ತಂಗಡಿಗೆ ಸಂಚು
- Teacher suspended/ವಿದ್ಯಾರ್ಥಿಗೆ ಥಳಿಸಿದ ಪ್ರಕರಣ : ಶಿಕ್ಷಕಿ ಅಮಾನತು.
- Varamahalakshmi Festival, ಶ್ರಾವಣದ ಶುಕ್ರವಾರ, ಮನೆ ಮನೆಗಳಲ್ಲಿ ವರಮಹಾಲಕ್ಷ್ಮಿ ಭಕ್ತಿ ಸಡಗರ
ಕಾರವಾರದಿಂದ ಭಟ್ಕಳದ ವರೆಗೆ ಅಷ್ಟೆ ಅಲ್ಲದೇ ಕರಾವಳಿ ಜಿಲ್ಲೆಯಲ್ಲಿ ಮೀನುಗಾರರ ಸಮಸ್ಯೆ ಸದಾ ಧ್ವನಿಯಾಗುವ ಮೂಲಕ ಗಮನ ಸೆಳೆದಿದ್ದರು..ಸಾಗರಮಾಲಾ ಯೋಜನೆಯಡಿಯಲ್ಲಿ ಕಾರವಾರದಲ್ಲಿ ನಿರ್ಮಾಣವಾಗಬೇಕಿದ್ದ ಎರಡನೇ ಹಂತದ ಬಂದರು ಯೋಜನೆ ವಿರುದ್ದ ಸಾಕಷ್ಟು ಹೋರಾಟ ಸಹ ಮಾಡಿದ್ದರು..ರಾಜಕೀಯವಾಗಿ ಗುರುತಿಸಿಕೊಂಡಿದ್ದ ಇವರು ಈ ಭಾರಿ ಜಿ.ಪಂ ಚುನಾವಣೆಯಲ್ಲಿ ಸ್ಪರ್ಧಿಸಲು ಮನಸ್ಸು ಮಾಡಿದ್ದರು..ಇವರು ಮೀನುಗಾರರಿಗೆ ಅಷ್ಟೆ ಅಲ್ಲದೆ ಎಲ್ಲರೊಂದಿಗೂ ಉತ್ತಮ ಸಂಬಂಧ ಹೊಂದಿದ್ದರು. ಕಿರಿಯರಿಂದ ಹಿಡಿದು ಹಿರಿಯವರಿಗೂ ಸಹ ಇವರನ್ನ ರಾಜಣ್ಣ ಅಂತಾನೆ ಕರೆಯುತ್ತಿದ್ದರು..ಸದಾ ಬಡವರ ಕಷ್ಟಕ್ಕೆ ಕೈ ಜೋಡಿಸಿ ಸಹಾಯ ಮಾಡುವ ಗುಣಹೊಂದಿದ್ದರು..
ಆರೋಗ್ಯವಾಗಿಯೇ ಇದ್ದ ಇವರಿಗೆ ರಾತ್ರಿ 1-30ರ ಸುಮಾರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನ ಕಾರವಾರ ಸರಕಾರಿ ಆಸ್ಪತ್ರೆ ಕರೆತರಲಾಗಿತ್ತು.ಆದರೆ ಅಷ್ಟೊತ್ತಿಗಾಗಲೇ ಅವರು ಪ್ರಾಣ ಕಳೆದುಕೊಂಡಿದ್ದರು. ಅವರ ನಿಧನದ ಸುದ್ದಿ ತಿಳಿದ ಸ್ಥಳೀಯ ಶಾಸಕ ಸತೀಶ ಸೈಲ್ ಆಸ್ಪತ್ರೆಗೆ ಆಗಮಿಸಿದ್ದಾರೆ. ಇನ್ನೂ ಮೀನುಗಾರಿಕಾ ಸಚಿವರಾಗಿರುವ ಮಂಕಾಳು ವೈದ್ಯ ಸಹ ಕಾರವಾರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.