suddibindu.in
ಕುಮಟಾ : ಶಿರೂರು ಗುಡ್ಡಕುಸಿತದ ಎರಡನೇ ಹಂತದ ಕಾರ್ಯಚರಣೆಯ ಸುದ್ದಿಗಾಗಿ ತೆರಳುತ್ತಿದ್ದ ವರದಿಗಾರರ ಕಾರು ಪಲ್ಟಿಯಾಗಿ ಮೂವರು ಗಾಯಗೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬೆಟ್ಕುಳಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಲ್ಟಿಯಾಗಿದೆ.
ಕೇರಳ ಮೂಲದ ಖಾಸಗಿ ಚಾನಲ್ ಒಂದರ ವರದಿಗಾಗರು ತೆರಳುತ್ತಿದ್ದ ಕಾರು ಚಾಲಕ ಎದುರಿಗೆ ಬಂದ ನಾಯಿಯನ್ನ ತಪ್ಪಿಸಲು ಹೋಗಿ ಕಾರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪಲ್ಟಿಯಾಗಿದೆ. ಇದರಿಂದಾಗಿ ಕಾರಿನಲ್ಲಿದ್ದ ಮೂವರು ವರದಿಗಾರರಿಗೆ ಗಾಯವಾಗಿದೆ. ತಕ್ಷಣ ಅವರನ್ನ ಕುಮಟಾ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಇದನ್ನೂ ಓದಿ
- ಪೆಟ್ರೋಲ್ ಬಂಕ್ನಲ್ಲಿ ಗಲಾಟೆ : ಹತ್ತಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ
- ಅನಂತಮೂರ್ತಿ ‘ಅನ್ಕಲ್ಚರ್ಡ್’ ರಾಜಕಾರಣಿ
- ಗುರು ಸೇವೆ ಸಲ್ಲಿಸಿದ ಕುಮಟಾ ನಗರ, ಭಟ್ಕಳ, ಸಾಗರ ನಾಮಧಾರಿ ಕೂಟ
ಅಪಘಾತದಲ್ಲಿ ಗಾಯಗೊಂಡ ವರದಿಗಾರರು ಶಿರೂರು ಗುಡ್ಡಕುಸಿತ ಘಟನೆಯ ಎರಡನೇ ಹಂತದ ಕಾರ್ಯಚರಣಗೆಯ ವರದಿ ಮಾಡಲು ಕೇರಳದಿಂದ ಶಿರೂರುಗೆ ಬರುತ್ತಿದ್ದ ವೇಳೆ ಘಟನೆ ನಡೆದಿದೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ..