suddibindu.in
Hassan::ಹಾಸನ :ರೈಲ್ವೆ ಹಳಿ ಮೇಲೆ ಮತ್ತೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿತ ಉಂಟಾಗಿ ರೈಲು ಸಂಚಾರ ಸಂಪೂರ್ಣವಾಗಿ ಬಂದ್ ಆಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ಬಾಳ್ಳುಪೇಟೆ ಬಳಿ ರೈಲ್ವೆ ಮಾರ್ಗದಲ್ಲಿ ತಡ ರಾತ್ರಿ ಈ ಘಟನೆ ನಡೆದಿದೆ.
ಮರಗಳ ಸಮೇತವಾಗಿ ರೈಲ್ವೆ ಹಳಿ ಮೇಲೆ ಕಲ್ಲು,ಮಣ್ಣು ಕುಸಿತವಾಗಿದೆ. ರೈಲ್ವೆ ಮಾರ್ಗದಲ್ಲಿ ಗುಡ್ಡಕುಸಿತ ಉಂಟಾಗಿರುವುದರಿಂದ ಹಾಸನ-ಮಂಗಳೂರು ಮಾರ್ಗದ ರೈಲುಗಳ ಸಂಚಾರ ಸ್ಥಗಿತ ಮಾಡಲಾಗಿದೆ.ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸಬೇಕಾದ ಸಕಲೇಶಪುರ, ಯಡಕುಮಾರಿ, ಶಿರವಾಗಿಲು,ಆಲೂರು ಸೇರಿ ಆರು ಕಡೆಯಲ್ಲ ರೈಲು ನಿಲುಗಡೆ ಮಾಡಲಾಗಿದೆ.
ಇದನ್ನೂ ಓದಿ
- ವಿವಾಹಕ್ಕೆ ಒಪ್ಪದ ಪ್ರೇಯಸಿ: ಪವನ್ ಭಟ್ ಆತ್ಮಹತ್ಯೆ
- ಚಿನ್ನ ಕಳೆದು ಕಣ್ಣೀರು ಹಾಕಿದ ಮಹಿಳೆ : ಒಂದು ಗಂಟೆಯಲ್ಲಿ ನಗು ತಂದ ಕುಮಟಾ ಪೊಲೀಸರು
- ರಂಜಿತಾ ಸಹೋದರನೊಂದಿಗೂ ಫಾರ್ಟಿಯಲ್ಲಿ ಪಾಲ್ಗೊಳ್ಳುತ್ತಿದ್ದ ರಫೀಕ್
ದಿಢೀರ್ ರೈಲುಗಳು ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರ ಪರದಾಡುವಂತಾಗಿದೆ. ಹೀಗಾಗಿ ಪ್ರಯಾಣಿಕರಿಗೆ ಯಾವ ಕಡೆ ಸಹ ಹೋಗೊದಕ್ಕೆ ಆಗದೆ ಸಾವಿರಾರು ಪ್ರಯಾಣಿಕರು ಜೈಲಿನಲ್ಲಿ ಕುಳಿತುಕೊಳ್ಳುವಂತಾಗಿದೆ. ಪರ್ಯಾಯ ವಾಹನ ವ್ಯವಸ್ಥೆ ಮಾಡುವಂತೆ ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ.ಇನ್ನೂ ರೈಲ್ಬೆ ಮಾರ್ಗದಲ್ಲಿ ಬಿದ್ದಿರುವ ಮಣ್ಣು ತೆರವು ಕಾರ್ಯಚರಣೆ ಆರಂಭಿಸಲಾಗಿದೆ.







