suddibindu.in
ಕಾರವಾರ : ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಈ ಹಿನ್ನಲೆಯಲ್ಲಿ ಇದೀಗ ಕಾರವಾರ ತಾಲೂಕಿನ ಬಿಣಗಾ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರ್ಮಿಸಲಾದ ಸುರಂಗ ಮಾರ್ಗದಲ್ಲಿ ಗುಡ್ಡಕುಸಿತ ಉಂಟಾಗಿ ವಾಹನ ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿದೆ.
ಬಿಣಗಾದಿಂದ ಕಾರವಾರಕ್ಕೆ ಸಂಚರಿಸುವ ಟನೆಲ್ ಬಳಿ ಗುಡ್ಡಕುಸಿತ ಉಂಟಾಗಿದೆ.ಸುರಂಗದ ಮೇಲ್ಭಾಗದಲ್ಲಿನ ಕಲ್ಲು ಮಣ್ಣು ಹೆದ್ದಾರಿಯಲ್ಲಿ ಬಿದ್ದಿದ್ದು,ವಅದೃಷ್ಟವಶಾತ್ ವಾಹನ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ವಾಹನ ಸಂಚಾರದ ಮಾರ್ಗ ಬದಲಾವಣೆ ಮಾಡಿದ್ದಾರೆ.
ಇದನ್ನೂ ಓದಿ
- ಗೋ ಕಳ್ಳತನ ಪ್ರಕರಣ ಬಯಲು: ಭಟ್ಕಳದಲ್ಲಿ ಇಬ್ಬರು ಆರೋಪಿ ಬಂಧನ
- ಗೋ ಕಳ್ಳತನ ಪ್ರಕರಣ ಬಯಲು: ಭಟ್ಕಳದಲ್ಲಿ ಇಬ್ಬರು ಆರೋಪಿ ಬಂಧನ
- ಸಿಎಂ ಪತ್ನಿ ಪಾರ್ವತಿ ಆರೋಗ್ಯದಲ್ಲಿ ಏರುಪೇರು; ಶೇಷಾದ್ರಿಪುರಂ ಖಾಸಗಿ ಆಸ್ಪತ್ರೆಗೆ ದಾಖಲು
ಮುನ್ನಚ್ಚರಿಕೆ ಕ್ರಮವಾಗಿ ಬಿಣಗಾ ಬಳಿ ಸುರಂಗಮಾರ್ಗದಲ್ಲಿ ವಾಹನ ಸಂಚಾರವನ್ನ ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಬಿಣಗಾದಿಂದ ಬೈತಖ್ಕೋಲ್ ಮೂಲಕ ವಾಹನ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಳೆ ಇದೇ ರೀತಿ ಮುಂದುವರೆದರೆ ಸುರಂಗ ಮಾರ್ಗದ ಬಳಿ ಇನ್ನೂ ಸಹ ಗುಡ್ಡಕುಸಿಯುವ ಸಾಧ್ಯತೆ ಇದೆ. ಸದ್ಯ IRB ಕಾರ್ಮಿಕರಿಂದ ಹೆದ್ದಾರಿಯಲ್ಲಿ ಬಿದ್ದ ಕಲ್ಲು ಮಣ್ಣು ತೆರವು ಮಾಡಲಾಗಿದೆ..






