suddibindu.in
ಕಾರವರ : ಐಆರ್‌ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಶಿರೂರು ಬಳಿ ಗುಡ್ಡಕುಸಿತವಾಗಿ ಹನ್ನೊಂದು ಮಂದಿಯನ್ನ ಬಲಿ ಪಡೆದ ಶಿರೂರು ಗುಡ್ಡ ಇನ್ನೂ ಅಪಾಯಕಾರಿಯಾಗಿದ್ದು,ಭಾರೀ ಪ್ರಮಾಣದಲ್ಲಿ ಕುಸಿತವಾಗಲಿದೆ ಎಂದು ಜಿಯೋಲಾಜಿಕಲ್ ತಜ್ಞರು ನಡೆಸಿರು ಸರ್ವೆಯಲ್ಲಿ ಬಹಿರಂಗವಾಗಿದೆ.
ಕಳೆದ ಏಳು ದಿನಗಳ ಹಿಂದೆ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡಕುಸಿತ ಉಂಟಾಗಿ ಒಂದೇ ಕುಟುಂಬದ ಐವರು ಸೇರಿ 11ಮಂದಿ ಮಣ್ಣಿನ ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದು, ಈಗಾಗಲೇ ಏಳು ಮಂದಿಯ ಶವ ಪತ್ತೆಯಾಗಿದ್ದು,ಇನ್ನೂ ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಇದನ್ನೂ ಓದಿ
- Murder/200ರೂ ಕೂಲಿ ಹಣಕ್ಕೆ ಬೀದಿಯಲ್ಲಿ ಬಿತ್ತು ಹೆಣ : ಉತ್ತರ ಕನ್ನಡದಲ್ಲಿ ಭೀಕರ ಘಟನೆ
- ಕಡಲತೀರದಲ್ಲಿ ಜಿಂಕೆಯ ಮೃತದೇಹ ಪತ್ತೆ
- ಹಟ್ಟಿಕೇರಿಯಲ್ಲಿ ಗ್ರಾಮೀಣ ಕ್ರೀಡೆಗೆ ಜೀವ ತುಂಬಿದ ಕೇಸರುಗದ್ದೆ ಕ್ರೀಡಾಕೂಟ
ಗುಡ್ಡಕುಸಿತವಾದ ಬಳಿಕ ಜಿಯೋಲಾಜಿಕಲ್ ತಜ್ಞರ ತಂಡ ಗುಡ್ಡಕುಸಿತವಾದ ಶಿರೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿನ ಮಣ್ಣು ಹಾಗು ಕಲ್ಲುಗಳನ್ನ ಪರೀಕ್ಷೆಗಾಗಿ ತೆಗೆದುಕೊಂಡು ಹೋಗಿದ್ದು,ಆ ಮಣ್ಣಿನ ಪರೀಕ್ಷೆ ನಡೆಸಿದ ತಜ್ಞರನ್ನ ತಂಡ ಇದೀಗ ಇನ್ನೂ ಕೂಡ ಗುಡ್ಡಕುಸಿತವಾಗುವ ಬಗ್ಗೆ ವರದಿಯನ್ನ ನೀಡಿದ್ದು,ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರನ್ನ ಸ್ಥಳಕ್ಕೆ