www.suddibindu.in
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾದ ಲಕ್ಷ್ಮಿಪ್ರೀಯಾ ಅವರನ್ನು ವಿಧಾನ ಪರಿಷತ್ ಶಾಸಕರಾದ ಗಣಪತಿ ಉಳ್ವೇಕರ ಅವರು ಗುರುವಾರ ಭೇಟಿಯಾಗಿ ಜಿಲ್ಲೆಯಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸದ ಬಗ್ಗೆ ಹಾಗೂ ಸಮುದ್ರ ಕೊರೆತದ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳಿಗೆ ಹೂ ಗುಚ್ಛ ನೀಡಿ ಸ್ವಾಗತಿಸಿ, ಬಳಿಕ ಕೆಲವು ಕಾಲ ಜಿಲ್ಲಾಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ ಶಾಸಕರು, ಕಾರವಾರ ಗಾಂಧಿ ಮಾರುಕಟ್ಟೆಯ ಬಳಿ ನೂತನ ಕಟ್ಟಡ ನಿರ್ಮಾಣದ ಬಗ್ಗೆ, ಕಾರವಾರ ಕಡಲತೀರದ ಸ್ವಚ್ಚತೆಗೊಳಿಸುವ ಬಗ್ಗೆ, ಈಗಾಗಲೇ ನಗರಸಭೆಯಿಂದ ನಿರ್ಮಾಣ ಮಾಡಿದ ಗಾರ್ಡನ್ ಗಳು ನಿರ್ವಹಣೆ ಮಾಡದೆ, ಗಿಡಿಗಳು ಸಾಯುವ ಸ್ಥಿತಿಯಲ್ಲಿದೆ. ಸದ್ಯ ನಗರಸಭೆಗೆ ಆಡಳಿತಾಧಿಕಾರಿ ತಾವು ಇರುವ ಕಾರಣ ಈ ಎಲ್ಲಾ ಕಾರ್ಯಗಳು ತಮ್ಮ ಅವಧಿಯಲ್ಲಿ ಆಗಬೇಕು ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಇದನ್ನೂ ಓದಿ
- gold rate/ ಚಿನ್ನ, ಬೆಳ್ಳಿ ದರ ದಸರಾ ವೇಳೆ ಇಳಿಕೆ ಸಾಧ್ಯತೆ
- ಏರ್ ಇಂಡಿಯಾ ವಿಮಾನ ದುರಂತ : ಗೋಕರ್ಣದಲ್ಲಿ ಪಿಂಡಪ್ರದಾನ
- Accident /ಘನಘೋರ ಅಪಘಾತ: ಲಾರಿ ಹರಿದು 8ಮಂದಿ ಸಾವು : 20ಕ್ಕೂ ಹೆಚ್ಚು ಜನ ಗಂಭೀರ
- Kumta/ಶಾಂತಿಕಾ ಪರಮೇಶ್ವರಿ ದೇವಿಗೆ ಲಕ್ಷಾಂತರ ರೂ ಮೌಲ್ಯದ ಹೂವಿನ ಪೂಜೆ
- ನಾಮಧಾರಿ ಸಮಾಜದ ಚಿಂತನ-ಮಂಥನ ಸಭೆಗೆ ಆಹ್ವಾನ
ಈ ವೇಳೆ ಹಾಲಿ ನಗರಸಭೆ ಸದಸ್ಯರು ಹಾಗೂ ಮಾಜಿ ನಗರಸಭೆ ಅಧ್ಯಕ್ಷರಾದ ಡಾ. ನಿತಿನ್ ಪಿಕಳೆ ಸಹ ಈ ಬಗ್ಗೆ ಮನವಿ ಮಾಡಿದರು. ಇನ್ನೂ ಕಾರವಾರ, ಅಂಕೋಲಾ ಭಾಗದ ಮಾಜಾಳಿ, ಹಾರವಾಡ ಸೇರಿದಂತೆ ಜಿಲ್ಲೆಯ ಕರಾವಳಿ ತಾಲೂಕುಗಳಾದ ಕುಮಟಾ, ಹೊನ್ನಾವರ, ಭಟ್ಕಳ ತಾಲೂಕುಗಳಲ್ಲೂ ಸಮುದ್ರ ಕೊರತದಿಂದ ಮೀನುಗಾರ ಕುಟುಂಬದವರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಕ್ಷಣ ತಾವು ಬಂದರು ಮತ್ತು ಮೀನುಗಾರಿಕಾ ಇಲಾಖೆ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿ ಸಮುದ್ರ ಕೊರೆತೆಯಾಗದಂತೆ ತಡೆಗೋಡೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡರು.
ಇನ್ನೂ ” ತಮ್ಮ ಅಧಿಕಾರಾವಧಿಯಲ್ಲಿ ಜಿಲ್ಲೆಗೆ ಒದಗಿಸಬಹುದಾದ ಯಾವುದೇ ಮೂಲಭೂತ ಸೌಕರ್ಯಗಳಿಗೆ ನನ್ನ ಸಹಮತವಿದ್ದು ಬಡವರು , ಶೃಮಿಕರು, ಕೃಷಿಕರ ಏಳಿಗೆಗಾಗಿ ಯಾವಾಗಲೂ ನನ್ನ ಸಹಕಾರವಿದೆ ” ಎಂದರು.