ಸುದ್ದಿ,ಜಾಹೀರಾತಿಗಾಗಿ ಸಂಪರ್ಕಿಸಿ :_9916127361
suddibindu.in
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ನೇತೃತ್ವದಲ್ಲಿ ಕುಮಟಾದ ಟೌನ್ ಹಾಲ್ ಒಳಗೆ ಗುರುವಾರ, ನಾಳೆ ಜುಲೈ 11ರಂದು ನಡೆಯುವ ಜನಸ್ಪಂದನ ಸಭೆ ಕೇವಲ ಕಾಟಾಚಾರಕ್ಕೆ ಮಾತ್ರವೇ ಎನ್ನುವ ಪ್ರಶ್ನೆ ಜನಸಾಮಾನ್ಯರನ್ನು ಕಾಡಲಾರಂಭಿಸಿದೆ.
ಜನಸ್ಪಂದನ’ ಹೆಸರೇ ಸೂಚಿಸುವಂತೆ ಜನರಿಗೆ ಸ್ಪಂದಿಸುವ ಸಭೆ ಇದಾಗಬೇಕು. ಆದರೆ ಕುಮಟಾದ ಟೌನ್ ಹಾಲ್ ಒಳಗೆ ಯಾವುದೂ ಸರಿಯಿಲ್ಲ, ಇಂತಹ ಸಭಾಂಗಣದಲ್ಲಿ ಜಿಲ್ಲಾ ಸಭೆ ನಡೆಸಿದರೆ ಸಭೆ ಅಸ್ತವ್ಯಸ್ತ ಆಗುವುದರಲ್ಲಿ ಅನುಮಾನವೇ ಬೇಡ ಎಂದು ಸಭೆ, ಸಮಾರಂಭ ನಡೆಸಿ ಅನುಭವ ಇರುವ ಖಾಸಗಿ ಸಂಘಟಕರು ಹೇಳುತ್ತಿದ್ದಾರೆ.
ಇದನ್ನೂ ಓದಿ
- ಹೆದ್ದಾರಿಯಲ್ಲಿ ಟಿಪ್ಪರ್- ಸ್ಕೂಟರ್ ಅಪಘಾತ : ಮಹಿಳೆ ಸ್ಥಳದಲ್ಲೇ ಸಾವು, ಪುಟ್ಟ ಮಕ್ಕಳಿಬ್ಬರೂ ಗಂಭೀರ
- ಹೆದ್ದಾರಿ ದಾಟುತ್ತಿದ್ದ ಪ್ರೇಮಕ್ಕನಿಗೆ ಅಪಘಾತ : ಕಾಲಿಗೆ ಗಂಭೀರ ಗಾಯ
- ಅಂಕೋಲಾ ಪುರಸಭೆಯಲ್ಲಿ ಕರ್ತವ್ಯ ಲೋಪ ಅಧಿಕಾರ ದುರುಪಯೋಗಪಡಿಸಿದ ಅಧ್ಯಕ್ಷರು ಮತ್ತು ಅದಕ್ಕೆ ಸಹಕರಿಸಿದ ಸದಸ್ಯರ ಮೇಲೆ ಮಾನ್ಯ ಲೋಕಾಯುಕ್ತರಲ್ಲಿ ದೂರು: ಮಂಜುನಾಥ ನಾಯ್ಕ
ಇದೇ ಸಭಾಂಗಣದಲ್ಲಿ ಇತ್ತೀಚೆಗಷ್ಟೇ ಕುಮಟಾ ಶಾಸಕ ದಿನಕರ ಶೆಟ್ಟಿ ನೇತೃತ್ವದಲ್ಲಿ ತಾಲೂಕಾ ಮಟ್ಟದ ಜನಸ್ಪಂದನ ಸಭೆ ನಡೆದಿತ್ತು. ಈ ಸಭಾಂಗಣದಲ್ಲಿ ಮೈಕ್ ಸೌಂಡ್ ಕೇಳಿಸುವುದಿಲ್ಲ ಎಂಬ ದೂರು ಮೊದಲಿನಿಂದಲೂ ಇದ್ದು, ಮೊನ್ನೆಯ ಸಭೆಯಲ್ಲೂ ಇದು ಮರುಕಳಿಸಿದೆ. ಇದೀಗ ಮತ್ತೆ ಇಲ್ಲಿಯೇ ಜಿಲ್ಲಾ ಮಟ್ಟದ `ಜನಸ್ಪಂದನ’ ಸಭೆಗೆ ಸಿದ್ಧತೆ ಮಾಡಿಕೊಂಡಿರುವುದು ಜನರಿಗೆ ಬೇಸರ ಮೂಡಿಸಿದೆ.
ಕುಮಟಾದಲ್ಲಿ ಸಕಲ ಸೌಕರ್ಯಗಳು ಇರುವಂತಹ ಸಭಾಂಗಣಗಳಿವೆ. ಆದರೂ ಈ ಅವ್ಯವಸ್ಥೆಯ ಟೌನ್ ಹಾಲಲ್ಲೇ ಸಭೆ ನಡೆಸಲು ಕಾರಣವೇನು. ಇದು ಸರ್ಕಾರದ ಆಸ್ತಿ ಇರಬಹುದು. ಆದರೆ ಅದನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕೂಡ ಸರ್ಕಾರದ ಜವಾಬ್ದಾರಿ ಅಲ್ಲವೇ? ಕುಮಟಾ ಟೌನ್ ಹಾಲಲ್ಲಿ ಫ್ಯಾನ್ ವ್ಯವಸ್ಥೆ, ಶೌಚಾಲಯಗಳ ವ್ಯವಸ್ಥೆ, ಸೌಂಡ್ ವ್ಯವಸ್ಥೆ ಇದಾವುದು ಸರಿಯಿಲ್ಲ ಎಂದು ಸ್ಥಳೀಯರು ಅನೇಕ ಬಾರಿ ಆಡಳಿತಕ್ಕೆ ದೂರಿದರೂ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಮುಂದಾದರೂ ಸ್ಥಳೀಯಾಡಳಿತ ತನ್ನ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಬಳಕೆಯ ಸರ್ಕಾರಿ ಕಟ್ಟಡಗಳನ್ನು ಶುಚಿಯಾಗಿಟ್ಟುಕೊಳ್ಳುವುದನ್ನು ರೂಡಿಸಿಕೊಳ್ಳಲಿ. ಜನಸ್ಪಂದನ ಕಾರ್ಯಕ್ರಮಕ್ಕೆ ಬರುವ ಜಿಲ್ಲಾಧಿಕಾರಿ, ಡಿಯುಡಿಸಿ ಇಲಾಖೆ ಅಧಿಕಾರಿಗಳು, ಸಚಿವರು, ಶಾಸಕರು ಈ ಕಟ್ಟಡದ ಸುತ್ತ ಒಂದು ಸುತ್ತು ಪರಿಶೀಲಿಸಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.