suddibindu.in
Kalaburagi:ಕಲಬುರಗಿ : ಕಲ್ಲುಗಣಿಯ ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕರು ದುರಂತ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದಲ್ಲಿ ನಡೆದಿದೆ.
ರಾವೂರ್ ಗ್ರಾಮದ ಐದು ವರ್ಷದ ಭುವನ್ ಹಾಗೂ ಆರು ವರ್ಷದ ದೇವು ಮೃತ ಬಾಲಕರಾಗಿದ್ದಾರೆ.ಈ ಇಬ್ಬರೂ ಯುವಕರು ಸೇರಿಕೊಂಡು ಆಟವಾಡಲು ಕಲ್ಲುಗಣಿ ಹೊಂಡದ ಬಳಿ ಆಡವಾಡುತ್ತಿದ್ದರು ಎನ್ನಲಾಗಿದ್ದು, ರಾವೂರ ಗ್ರಾಮದ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಹತ್ತಿರದ ಕಲ್ಲುಗಣಿಯ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇವರು ರಾವೂರ್ ಗ್ರಾಮದ ವಿವೇಕಾನಂದ ಶಿಶುವಿಹಾರ ಶಾಲೆಯಲ್ಲಿ ಓದುತ್ತಿದ್ದರು.
ಇದನ್ನೂ ಓದಿ
- Murder/200ರೂ ಕೂಲಿ ಹಣಕ್ಕೆ ಬೀದಿಯಲ್ಲಿ ಬಿತ್ತು ಹೆಣ : ಉತ್ತರ ಕನ್ನಡದಲ್ಲಿ ಭೀಕರ ಘಟನೆ
- ಕಡಲತೀರದಲ್ಲಿ ಜಿಂಕೆಯ ಮೃತದೇಹ ಪತ್ತೆ
- ಹಟ್ಟಿಕೇರಿಯಲ್ಲಿ ಗ್ರಾಮೀಣ ಕ್ರೀಡೆಗೆ ಜೀವ ತುಂಬಿದ ಕೇಸರುಗದ್ದೆ ಕ್ರೀಡಾಕೂಟ
ಭುವನ್ ಹಾಗೂ ದೇವು ಇಬ್ಬರು ಒಟ್ಟಾಗಿ ಆಟವಾಡಲು ತೆರಳಿದ್ದಾರೆ. ಬಹಳ ಸಮಯವಾದರೂ ವಾಪಸ್ ಬಾರದೇ ಇದ್ದಾಗ ಸಂಬಂಧಿಕರು ಹುಡುಕಲು ಆರಂಭಿಸಿದ್ದಾರೆ. ಬಾಲಕನ ಬಟ್ಟೆ ಹಾಗೂ ಆಟವಾಡಲು ಬಳಸುತ್ತಿದ್ದ ಟೈಯರ್ ಗಾಲಿಯು ಗಣಿಯ ಪಕ್ಕದಲ್ಲಿ ಪತ್ತೆಯಾಗಿತ್ತು. ಅನುಮಾನಗೊಂಡು ಹುಡುಕಲು ಆರಂಭಿಸಿದಾಗ ಮೃತ ಸ್ಥಿತಿಯಲ್ಲಿ ಇಬ್ಬರು ಬಾಲಕರ ಶವಗಳು ಪತ್ತೆಯಾಗಿದೆ.ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.