suddibindu.in
ಹಾವೇರಿ : ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಹಿಂದಿನಿಂದ ಟಿಟಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೆಳ್ಳಂ ಬೆಳಿಗ್ಗೆ 13ಮಂದಿ ಮೃತಪಟ್ಟಿರುವ ಘಟನೆ ಹಾವೇರಿಯ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟಿರುವವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ ಗ್ರಾಮದವರಾಗಿದ್ದು, ಇವರೆಲ್ಲಾರು ಬೆಳಗಾವಿ ಜಿಲ್ಲೆಯ ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ವಾಪಸ್ ಭದ್ರಾವತಿಗೆ ಹೋಗುತ್ತಿರುವಾಗ ಘನಘೋರ ಅಪಘಾತ ನಡೆದಿದೆ.ತಡ ರಾತ್ರಿ ಮೂರು ಗಂಟೆ ಸುಮಾರಿಗೆ ಅಪಘಾತ ನಡೆದಿದೆ. ಅಪಘಾತದ ರಭಸಕ್ಕೆ ಟಿಟಿ ವಾಹನ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಮೃತದೇಹಗಳು ಸಹ ಗುರುತು ಸಿಗದ ಪರಿಸ್ಥಿತಿ ಉಂಟಾಗಿದೆ
ಇದನ್ನೂ ಓದಿ
- ವಿದ್ಯಾರ್ಥಿಗಳ ಸೌಲಭ್ಯಕ್ಕಾಗಿ ಬಸ್ ಸಂಚಾರಕ್ಕೆ ರೂಪಾಲಿ ನಾಯ್ಕ ಮನವಿ
- ಬನವಾಸಿ,ಸಿದ್ದಾಪುರ ಸಾಗರಕ್ಕೆ ಸೇರ್ಪಡೆ ತಿರುಕನ ಕನಸು: ಶಾಸಕ ಶಿವರಾಮ ಹೆಬ್ಬಾರ
- “ಚಿನ್ನದ ಬೆಲೆ ಕುಸಿತದ ನಿರೀಕ್ಷೆ: ಜಾಗತಿಕ ಹೂಡಿಕೆದಾರರ ಗಮನ ಫೆಡ್ ಸಭೆಯತ್ತ” ಬಂಗಾರದ ಪ್ರಿಯರಿಗೆ ‘ಬಂಗಾರ’ ದ ಸುದ್ದಿ
ವಾಹನದಲ್ಲಿ ಸಿಲುಕಿರುವ ಎಲ್ಲಾ ಮೃತದೇಹವನ್ನ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸ ಪಟ್ಟು ಹೊರ ತೆಗೆದಿದ್ದಾರೆ.