suddibindu.in
ಕಾರವಾರ : ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ತಾಲೂಕಾ ಆಡಳಿತ ಸೌಧ ಕಟ್ಟಡಕ್ಕೆ ಸಬ್ ರಿಜಿಸ್ಟರ್ ಕಚೇರಿ ಸ್ಥಳಾಂತರವಾಗದೆ ಇರುವ ಬಗ್ಗೆ ಕುಮಟಾ ಶಾಸಕ ದಿನಕರ ಶೆಟ್ಟಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.
ಕಾರವಾರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಶಾಸಕ ದಿನಕರ ಶೆಟ್ಟಿ ಅವರು ಜನರಿಗೆ ಅನುಕೂಲವಾಗಲೆಂದು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಆಡಳಿತ ಸೌಧವನ್ನ ನಿರ್ಮಾಣ ಮಾಡಿ ಉದ್ಘಾಟನೆ ಮಾಡಲಾಗಿದೆ. ಆದರೆ ಈಗಾಗಲೇ ಎಲ್ಲಾ ಕಚೇರಿಯನ್ನ ತಾಲೂಕಾ ಆಡಳಿತ ಕಚೇರಿಗೆ ಸ್ಥಳಾಂತರ ಮಾಡಲಾಗಿದೆ.
ಇದನ್ನೂ ಓದಿ
- Fish market/ಮೀನು ಮಾರುಕಟ್ಟೆ ಸ್ಥಳಾಂತರವಿಲ್ಲ : ಸಚಿವ ಮಂಕಾಳ್ ವೈದ್ಯ
- ಸ್ಮರಣೀಯ ಸೇವೆಯೊಂದಿಗೆ ವಿಶ್ರಾಂತ ಜೀವನಕ್ಕೆ ಅಡಿಯಿಡುತ್ತಿರುವ ಶಿಸ್ತಿನ ಶಿಕ್ಷಕ ಉಮೇಶ ನಾಯ್ಕ
- ನಾಳೆ ಜಿಲ್ಲೆಯ ಈ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಫ್ರೌಢ ಶಾಲೆಗಳಿಗೆ ರಜೆ
ಆದರೆ ಯಾಕೆ ಸಬ್ ರಿಜಿಸ್ಟರ್ ಕಚೇರಿ ಸ್ಥಳಾಂತರ ಮಾಡಿಲ್ಲ..ಸ್ಥಳಾಂತರ ಮಾಡೋದಕ್ಕೆ ಏನ ಸಮಸ್ಯೆ, ಸರಕಾರದ ಹಣ ಹಾಳ ಮಾಡಬೇಡಿ. ಈ ಬಗ್ಗೆ ನಾನು ಪೋನ್ ಮಾಡಿದರೆ ಪೋನ್ ರೀಸ್ವ್ ಮಾಡಲ್ಲ.ನೋಡಿ ತಕ್ಷಣ ಈಗ ಇರುವ ಸಬ್ ರಿಜಿಸ್ಟರ್ ಕಚೇರಿಯನ್ನ ಆದಷ್ಟು ಶೀಘ್ರದಲ್ಲಿ ತಾಲೂಕಾ ಆಡಳಿತ ಕಚೇರಿಗೆ ಸ್ಥಳಾಂತ ಮಾಡಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಕುಮಟಾ ಸಬ್ ರಿಜಿಸ್ಟರ್ ಕಚೇರಿ ಸ್ಥಳಾಂತರ ಆಗದೆ ಇರುವ ಬಗ್ಗೆ ಸುದ್ದಿ ಬಿಂದು ಕತ್ತಲೆ ಕೋಣೆಯಲ್ಲಿ ಕುಮಟಾ ಸಬ್ ರಿಜಿಸ್ಟರ್ ಕಚೇರಿ ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಮಾಡಿರುವುದನ್ನ ಸ್ಮರಿಸಬಹುದಾಗಿದೆ. https://suddibindu.in/2024/06/08/sub-register-office-kumta//