suddibindu.in
ಅಂಕೋಲಾ: ಹೊಸ ಕಾರು ಖರೀದಿಸಿ ಕುಟುಂಬ ಸಮೇತ ಪೂಜೆಗೆಂದು ದೇವಸ್ಥಾನಕ್ಕೆ ಹೊರಟ್ಟಿದ್ದ ವೇಳೆ ಕಾರು ಪಲ್ಟಿಯಾಗಿ(car accident)ಕಾರು ಸಂಪೂರ್ಣ ಜಖಂಗೊಂಡು ಕಾರಿನಲ್ಲಿದ್ದ 8ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಸಮೀಪ ರಾಷ್ಟ್ರೀಯ ಹೆದ್ದಾರಿ 66ರ ಶೆಟಗೇರಿ ಕ್ರಾಸ್ ಸಮೀಪದಲ್ಲಿ ನಡೆದಿದೆ.
ತೆಲಂಗಾಣದ ಹೈದರಾಬಾದ್ (Telangana Hyderabad) ಮೂಲದ ಕುಟುಂಬವೊಂದು ನಿನ್ನೆ ಹೈದರಾಬಾದ್ ನಲ್ಲಿ ಕಾರು ಖರೀದಿಸಿ ಕುಟುಂಬ.ಹೊಸ ಕಾರು ಖರೀದಿಸಿದ ಸಂಭ್ರಮದಲ್ಲಿ ಕುಟುಂಬದೊಂದಿಗೆ ಮುರುಡೇಶ್ವರ (Murudeshwara Temple)ದೇವಾಲಯಕ್ಕೆ ಬರುತ್ತಿದ್ದರು..ಈ ವೇಳೆ ಕಾರಿನಲ್ಲಿ ಆಕಸ್ಮಿಕವಾಗಿ ಹೊಗೆ ಕಾಣಿಸಿಕೊಂಡಿದ್ದು ಕಾರಿನ ಚಾಲಕ ಬ್ರೇಕ್ ಹಾಕಲು ಯತ್ನಿಸಿದಾಗ ಬ್ರೇಕ್ ಫೇಲಾಗಿದ್ದರಿಂದ ಪಕ್ಕದಲ್ಲಿನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಇದನ್ನೂ ಓದಿ
- ಸೈಲ್ಗೆ ಒಂದು ವರ್ಷ ಜೈಲು ಶಿಕ್ಷೆ 8 ಸಾವಿರ ದಂಡ
- ಹೆಲ್ಮೆಟ್ ಧರಿಸೋಣ-ಜೀವ ಉಳಿಸೋಣ: ಕಾರವಾರದಲ್ಲಿ ಪೊಲೀಸರಿಂದ ಜಾಗೃತಿ ಬೈಕ್ ರ್ಯಾಲಿ
- KDCC BANK/ ಕೆಡಿಸಿಸಿ ಬ್ಯಾಂಕ್ನ ಶತಮಾನ ಇತಿಹಾಸಕ್ಕೆ ಹೊಸ ಪುಟ ಬರೆಯಲು–ಸರಸ್ವತಿ ಎನ್. ರವಿ ದಿಟ್ಟ ಹೆಜ್ಜೆ
ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್ ನಲ್ಲಿನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಹೆದ್ದಾರಿಯ ಇನ್ನೊಂದು ಬದಿಗೆ ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರು ಮಕ್ಕಳು, ಮಹಿಳೆಯರು ಸೇರಿದಂತೆ ಎಂಟು ಜನ ಗಾಯಗೊಂಡಿದ್ದಾರೆ. ಈರ್ವರ ಸ್ಥಿತಿ ಗಂಭೀರವಾಗಿದೆ. ಅಘಾತದ ವೇಳೆ ಏರ್ ಬ್ಯಾಗ್ ತೆರೆದುಕೊಂಡ ಪರಿಣಾಮ ಹೆಚ್ಚಿನ ಅವಘಡ ಸಂಭವಿಸಿಲ್ಲ ಎನ್ನಲಾಗಿದೆ. ಅಪಘಾತ ರಭಸಕ್ಕೆ ಹೊಸ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.