suddibindu.in
Informed : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ 12ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದ ದರ್ಶನಗೆ ಇಂದಿನಿಂದ 13ದಿನಗಳ‌ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪರಪ್ಪನ ಅಗ್ರಗಾರ ಜೈಲಿಗೆ ಹೋಗುವೇಳೆ ಅಭಿನಾನಿಗಳತ್ತ ಕೈ ಬಿಸಿದ ನಟ ದರ್ಶನ್ ಪ್ಲೈಯಿಂಗ್ ಕಿಸ್‌ ಕೊಟ್ಟು ನಾನು ಆರಾಮಾಗಿದ್ದೇನೆಂದಿದ್ದಾರೆ‌.

ಬಳಿಕ ಪೊಲೀಸ್ ವ್ಯಾನ್​ನಲ್ಲಿ ಪರಪ್ಪನ ಅಗ್ರಹಾರಕ್ಕೆ ಪ್ರಯಾಣ ನಡೆಸಿದರು. ಈ ವೇಳೆ ದರ್ಶನ್ ಅವರು ಪೊಲೀಸ್ ವ್ಯಾನ್​ನಲ್ಲೇ ಮೊದಲ ಬಾರಿಗೆ ತಮ್ಮ ಅಭಿಮಾನಿಗಳತ್ತ ಕೈ ಬೀಸಿ ಮಾತನಾಡಿದ ದರ್ಶನ್ ಅವರು ನನಗೆ ಏನು ಆಗುವುದಿಲ್ಲ.ಹೆದರಬೇಡಿ ಎಂದು ಅಭಿಮಾನಿಗಳಿಗೆ ಧೈರ್ಯ ತುಂಬಿದ್ದಾರೆ.

ಇದನ್ನೂ ಓದಿ

ಪೊಲೀಸ್ ವ್ಯಾನ್​ ಹೊರಗೆ ನೆರೆದಿದ್ದ ಅಭಿಮಾನಿಗಳತ್ತ ಕೈಬೀಸಿದ ದರ್ಶನ್ ಅವರು ತಮ್ಮ ಎಂದಿನ ಶೈಲಿನಲ್ಲಿ ಪ್ಲೈಯಿಂಗ್ ಕಿಸ್‌ ಕೊಟ್ಟು ನಾನು ಆರಾಮಾಗಿದ್ದೇನೆ. ನನಗೆ ಏನೂ ಆಗಲ್ಲ ಹೆದರಬೇಡಿ ಎಂದಿದ್ದಾರೆ.ನಟ ದರ್ಶನ್ ಅವರು ಕೊಲೆ ಕೇಸ್‌ನಲ್ಲಿ ಬಂಧನವಾದ ಬಳಿಕ ಅವರ ಅಭಿಮಾನಿಗಳು ಆತಂಕಕ್ಕೀಡಾಗಿದ್ದಾರೆ. ಬಂಧನದ ಬಳಿಕ ದರ್ಶನ್ ಮೊದಲ ಬಾರಿಗೆ ಫ್ಯಾನ್ಸ್‌ಗೆ ಮೊದಲ ಸಂದೇಶ ನೀಡಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಪೊಲೀಸ್ ವ್ಯಾನ್​ನಲ್ಲಿ ನಟ ದರ್ಶನ್ ಅವರು ಪ್ರತಿಕ್ರಿಯೆ ನೀಡಿರೋ ವಿಡಿಯೋ ವೈರಲ್ ಆಗಿದೆ.