suddibindu.in
Kumta:ಕುಮಟಾ: ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಮಹಿಳೆ ಓರ್ವಳಿಗೆ ವಿದ್ಯುತ್ ತಂತಿ ತಗುಲಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹರಕಡೆ ಗ್ರಾಮದಲ್ಲಿ ನಡೆದಿದ್ದು, ತೋಟಕ್ಕೆ ಅಕ್ರಮವಾಗಿ ಅಳವಡಿಸಿದ ವಿದ್ಯುತ್ ತಗುಲಿ ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದೆ.
ಸುಶೀಲಾ ಅಂಬಿಗ (55) ಮೃತಪಟ್ಟಿರುವ ಮಹಿಳೆಯಾಗಿದ್ದಾಳೆ. ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ನಡೆದುಕೊಂಡು ಮನೆಗೆ ಹೋಗುವೇಳೆ ತೋಟದ ಕಾಂಪೌಂಡ್ ಬಳಿ ತೆಂಗಿನ ಕಾಯಿ ಬಿದ್ದಿರುವುದನ್ನ ನೋಡಿ ಆ ಮಹಿಳೆ ಕಾಯಿ ಎತ್ತಲು ಹೋಗಿದ್ದ ವೇಳೆ ಕಾಂಪೌಂಡ್ಗೆ ವ್ಯಕ್ತಿಯೊಬ್ಬರು ವಿದ್ಯುತ್ ಅಳವಡಿಸಿದ ವಿದ್ಯುತ್ ತಗುಲಿ ಮಹಿಳೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಇದನ್ನು ಓದಿ
- ಕರಾವಳಿ ಉತ್ಸವ : ಐತಿಹಾಸಿಕ ಸ್ಥಳ, ಅಲ್ಲಿಗೆ ಭೇಟಿ ನೀಡಿದ ಗಣ್ಯ ವ್ಯಕ್ತಿಗಳ ಛಾಯಾಚಿತ್ರ ಪ್ರದರ್ಶನ
- ಆಕಾಶದಲ್ಲೇ ಮಾನವೀಯತೆ: ವಿಮಾನದಲ್ಲಿ ಅಸ್ವಸ್ಥ ಮಹಿಳೆಯ ಪ್ರಾಣ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್
- Indian-Navy/ನೌಕಾನೆಲೆ ವಜ್ರಕೋಶದಲ್ಲಿ ರಹಷ್ಯ ಸ್ಪೋಟ ವಿಚಾರ : ನೌಕಾಪಡೆ ಸ್ಪಷ್ಟನೆ
ಘಟನೆ ನಡೆದ ಬಳಿಕ ಕೆಇಬಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ವೇಳೆ ಕಾಂಪೌಂಡ್ಗೆ ಅಕ್ರಮವಾಗಿ ವಿದ್ಯುತ್ ಅಳವಡಿಸಿರುವುದು ಪತ್ತೆಯಾಗಿದೆ ಎನ್ನಲಾಗಿದೆ. ಈ ಬಗ್ಗೆ ಕುಮಟಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಕೈಕೊಂಡಿದ್ದಾರೆ.





