suddibindu.in
ಭಟ್ಕಳ:ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮತ್ತೊಬ್ಬ ಶಂಕಿತ ಉಗ್ರನಿಗಾಗಿ(Suspected Terrorist) ಮಹಾರಾಷ್ಟ್ರದ ಉಗ್ರ ನಿಗ್ರಹ ಪಡೆ (ಎಟಿಎಸ್) ತೀವ್ರ ಶೋಧ ನಡೆಸಿದ್ದು, ಶಂಕಿತ ಉಗ್ರನ ನಿವಾಸಕ್ಕೆ ATS ಅಧಿಕಾರಿಗಳು ನೋಟಿಸ್ ಅಂಟಿಸಿದ್ದು, ಶಂಕಿತನ ಬಂಧನಕ್ಕೆ ಉತ್ತರ ಕನ್ನಡ ಪೊಲೀಸರ ಸಹಕಾರ ಕೋರಿದ್ದಾರೆ.

ಮಹಾರಾಷ್ಟ್ರದಲ್ಲಿ ಕೆಲ ವರ್ಷಗಳ ಹಿಂದೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಭಟ್ಕಳ ಮೂಲದ ವ್ಯಕ್ತಿಯನ್ನು ಜೂನ್ 21ಕ್ಕೆ ಹಾಜರು ಪಡಿಸಲು ಪುಣೆ ಜಿಲ್ಲಾ ನ್ಯಾಯಾಲಯ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಪುಣೆಯ ಅಧಿಕಾರಿಗಳ ತಂಡ ಭಟ್ಕಳದಲ್ಲಿ ತಲಾಶ್ ನಡೆಸಿದೆ. ಆರೋಪಿ ಪತ್ತೆಗೆ ಉಗ್ರ ನಿಗ್ರಹ ಪಡೆ ಉತ್ತರ ಕನ್ನಡ ಜಿಲ್ಲಾಡಳಿತದ ನೆರವು ಕೋರಿದೆ.
ಇದನ್ನೂ ಓದಿ
- ಅಕ್ರಮ ದಂಧೆಕೋರರರ ಪರ ನಿಂತ ಕನ್ನಡ ಪರ ಸಂಘಟನೆ ಅಧ್ಯಕ್ಷ : PSI ಎತ್ತಂಗಡಿಗೆ ಸಂಚು
- Teacher suspended/ವಿದ್ಯಾರ್ಥಿಗೆ ಥಳಿಸಿದ ಪ್ರಕರಣ : ಶಿಕ್ಷಕಿ ಅಮಾನತು.
- Varamahalakshmi Festival, ಶ್ರಾವಣದ ಶುಕ್ರವಾರ, ಮನೆ ಮನೆಗಳಲ್ಲಿ ವರಮಹಾಲಕ್ಷ್ಮಿ ಭಕ್ತಿ ಸಡಗರ
ಈತ ಮಹಾರಾಷ್ಟ್ರದಲ್ಲಿ ಉಗ್ರ ನಿಗ್ರಹ ಪಡೆ ಪುಣೆ ವಿಭಾಗದಲ್ಲಿ ಯುಎಪಿಎಎ (ಕಾನೂನುಬಾಹಿರ ಕೃತ್ಯ ತಡೆ ಕಾಯಿದೆ) ಅಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಅಬ್ದುಲ್ ಕಬೀರ ಸುಲ್ತಾನ ಅಲಿಯಾಸ್ ಮೌಲಾನಾ ಸುಲ್ತಾನ್ ಹೆಸರಿನ ಆರೋಪಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ನವಾಯತ ಕಾಲೊನಿಯ ಹಾಜಿ ಮಂಜಿಲ್ ನಿವಾಸಿ ಎಂದು ಗುರುತಿಸ ಲಾಗಿದೆ.ಆರೋಪಿ ಭಟ್ಕಳ ಮೂಲದವನೇ ಆದರೂ ಪುಣೆಯಲ್ಲಿ ಸಕ್ರಿಯನಾಗಿದ್ದ ಎಂದು ಹೇಳಲಾಗುತ್ತಿದೆ.
ಪುಣೆಯಲ್ಲಿ ನಡೆದ ಉಗ್ರ ಕೃತ್ಯಕ್ಕೆ ಸಂಬಂಧಿಸಿದ ಆರೋಪಿಯು ಭಟ್ಕಳ ಮೂಲ ಎಂದಷ್ಟೇ ಗೊತ್ತಾಗಿದೆ. ವಾಸ್ತವದಲ್ಲಿ ಎಲ್ಲದ್ದಾನೆ ಎಂಬ ಸುಳಿವು ಸಿಕ್ಕಿಲ್ಲ. ಕೋರ್ಟ್ ವಾರಂಟನ್ನು ಮಹಾರಾಷ್ಟ್ರದ ಎಟಿಸ್ ಆರೋಪಿಯ ಮನೆಗೆ ಅಂಟಿಸಲಾಗಿದೆ ಎಂದು -ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.