suddibindu.in
Dharwad news: ಧಾರವಾಡ: ಈಜಲು ಹೋಗಿದ್ದ ಇಬ್ಬರು ಯುವಕರು ಮುಳುಗಿ ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ಮನಸೂರು ಗ್ರಾಮದ ಹೊರವಲಯದಲ್ಲಿ ಸಂಭವಿಸಿದೆ.
ಮಾಳಮಡ್ಡಿಯ ಶ್ರೇಯಸ್ ಹಾಗೂ ಇನ್ನೋರ್ವ ಸೇರಿಕೊಂಡು ಮನಸೂರು ಗ್ರಾಮದ ಹೊರವಲಯದಲ್ಲಿರುವ ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿದ್ದರು. ಆಗ ಈಜು ಬರದೇ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ
- ಇಂದಿನ ರಾಶಿಫಲ ಹಾಗೂ ನಿತ್ಯದ ಪಂಚಾಂಗ
- ಮಗನಿಗೆ ಬಾತ್ರೂಮ್ನಲ್ಲಿ ಕೂಡಿ ಹಾಕಿ ತಂದೆಯಿಂದ ಚಿತ್ರಹಿಂಸೆ : ಹೆಗಡೆಯಲ್ಲಿ ಘಟನೆ
- ಕಾಂಡ್ಲಾ ವನಗಳು ಸಾಗರ ತೀರಗಳ ರಕ್ಷಾ ಕವಚ: ಎ.ಸಿ.ಎಫ್ ಕೃಷ್ಣೇ ಗೌಡ
ಸ್ಥಳಕ್ಕೆ ಅಗ್ನಿಶಾಮಕ ದಳದವರು ಭೇಟಿ ನೀಡಿ ಶ್ರೇಯಸ್ ಎಂಬಾತನ ಶವವನ್ನು ಹೊರತೆಗೆದಿದ್ದಾರೆ. ಇನ್ನೋರ್ವನ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ಹಾಗೂ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.







