suddibindu.in
SHIVAMOGGA ಶಿವಮೊಗ್ಗ : ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಬಿಜೆಪಿಯ ಮಾಜಿ ಎಂಎಲ್ಸಿ ಭಾನುಪ್ರಕಾಶ್ ಅವರು ನಿಧನರಾಗಿರುವ ಘಟನೆ ನಗರದಲ್ಲಿ ನಡೆದಿದೆ
ರಾಜ್ಯ ಕಾಂಗ್ರೆಸ್ ಸರಕಾರ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿರುವುದನ್ನ ವಿರೋಧಿಸಿ ಬಿಜೆಪಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿತ್ತು.ಅದೇ ರೀತಿ ಶಿವಮೊಗ್ಗ ನಗರದ ಗೋಪಿವೃತ್ತದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಎಂ. ಬಿ. ಭಾನುಪ್ರಕಾಶ್ ಪಾಲ್ಗೊಂಡಿದ್ದರು.ಈ ಪ್ರತಿಭಟನೆಗೆ ಬಿಜೆಪಿ ಹಿರಿಯ ಮುಖಂಡ ಮಾಜಿ MLC ಎಂ.ಬಿ. ಭಾನುಪ್ರಕಾಶ್ ಕೂಡ ಹಾಜರಾಗಿ ಸರಕಾರದ ವಿರುದ್ಧ ಪ್ರತಿಭಟಿಸಿದರು.ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಭಾನು ಪ್ರಕಾಶ್ ಅವರು ಭಾಷ ಸಹ ಮಾಡಿದ್ದರು.
ಇದನ್ನೂ ಓದಿ
- ನ್ಯಾಯ ಸಿಗದಿದ್ದರೆ ಬಸ್ಸ್ಟ್ಯಾಂಡ್ನಲ್ಲಿ ಧರಣಿ : ಆಟೋ ಚಾಲಕರಿಂದ ಎಚ್ಚರಿಕೆ
- ಮಿನಿ ಒಲಿಂಪಿಕ್ನಲ್ಲಿ ಕಾರವಾರದ ಪೂರ್ವಿ ಹರಿಕಂತ್ರಗೆ ಚಿನ್ನದ ಪದಕ
- ಕಾರವಾರದಲ್ಲಿ ಮೂರು ಬಾಂಬ್ ಪತ್ತೆ.!! ಸಮುದ್ರ, ಬಂದರು, ಸೇತುವೆ ಎಲ್ಲೆಡೆ ಪೊಲೀಸ್ ಅಲರ್ಟ್!
ಪ್ರತಿಭಟನೆ ಮುಗಿಯುತ್ತಿದ್ದಂತೆ ಭಾನುಪ್ರಕಾಶದ ಅವರು ದಿಢೀರ್ ಕುಸಿದು ಬಿದ್ದಿದ್ದಾರೆ. ತಕ್ಷಣ ಬಿಜೆಪಿ ಮುಖಂಡರು ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ.ತಪಾಸಣೆ ಮಾಡಿದ ಆಸ್ಪತ್ರೆಯ ವೈದ್ಯರು ಭಾನು ಪ್ರಕಾಶ ಮೃತಪಟ್ಟಿರುವುದನ್ನ ಖಚಿತ ಪಡಿಸಿದ್ದಾರೆ.
ಮೃತರಾಗಿರುವ ಭಾನು ಪ್ರಕಾಶ ಅವರಿಗೆ 68 ವರ್ಷ ವಯಸ್ಸಾಗಿದ್ದು, ಇವರು ಶಿವಮೊಗ್ಗ ಜಿಲ್ಲಾ ಪಂಚಾಯತ ಸದಸ್ಯರಾಗಿ,ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾಗಿ, ಕಾರ್ಯನಿರ್ವಹಿಸಿದ್ದಾರೆ.





