suddibindu.in
ಅಯ್ಯೋಧ್ಯೆ: ಈ ಭಾರೀಯ ಲೋಕಸಭಾ ಚುನಾವಣೆ ಪೂರ್ವದಲ್ಲಿ, ಅಯ್ಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಪೂರ್ಣ ಮಾಡದೆ ನರೇಂದ್ರ ಮೋದಿ ಸರಕಾರ ಶ್ರೀರಾಮನ ಮಂದಿರ ನಿರ್ಮಣ ಮಾಡಿರುವ ಬಗ್ಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿತ್ತು.ಶ್ರೀರಾಮನ ಹೆಸರಲ್ಲಿ ಲೋಕಸಭಾ ಗೆಲ್ಲುಬಹುದು ಎನ್ನುವ ಮೋದಿ ಲೆಕ್ಕಾಚಾರ ಇದೀಗ ತಲೆಕೆಳಗಾಗಿದ್ದು ಅಯ್ಯೋಧ್ಯೆಯಲ್ಲಿಯೆ ಬಿಜೆಪಿ ಅಭ್ಯರ್ಥಿಗೆ ಹಿನ್ನಡೆ ಉಂಟಾಗಿದೆ. ಇದು ಅಪಾಯದ ಮುನ್ಸೂಚನೆ ಎನ್ನುವಂತಾಗಿದೆ.
ಬಿಜೆಪಿಯ ಅಭ್ಯರ್ಥಿ ಲಾಲು ಸಿಂಗ್ ಅವರು ಸಮಾಜವಾದಿ ಪಾರ್ಟಿಯ ಅಭ್ಯರ್ಥಿ ಅವದೇಶ್ ಪ್ರಸಾದ್ ಅವರ ರುದ್ಧ 10 ಸಾರಕ್ಕೂ ಹೆಚ್ಚು ಮತಗಳ ಅಂತರದಿಂದ ಹಿನ್ನಡೆ ಅನುಭವಿಸಿದರು. ಕಳೆದ ಎರಡು ಅವಧಿಗೆ ಸಂಪೂರ್ಣ ಬಿಜೆಪಿ ಸಂಸದರನ್ನು ಹೊಂದಿದ್ದ ಅಯೋಧ್ಯೆಯಲ್ಲಿ ಬಿಜೆಪಿ ಸೋಲು ಅನುಭವಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಇಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿಗೆ ಭಾರೀ ಮುಖಭಂಗವಾಗಿದೆ.ರಾಮ ಮಂದಿರ ಉದ್ಘಾಟನೆ ನಂತರವೂ ಬಿಜೆಪಿ ಇಲ್ಲಿ ಸೋತಿದ್ದು, ಬಿಜೆಪಿ ಈ ಸೋಲನ್ನು ಒಪ್ಪಿಕೊಳ್ಳಲು ಆ ಪಕ್ಷದ ಕಾರ್ಯಕರ್ತರಿಗೆ ಇರಿಸುಮುರಿಸಾಗಿದೆ.
ಇದನ್ನೂ ಓದಿ
- ಕಾರವಾರ ನಗರದ ಹೃದಯಭಾಗದಲ್ಲೇ ಕೆಟ್ಟು ನಿಂತ ಬಸ್ : ಪ್ರಯಾಣಿಕರಿಗೆ ನಿತ್ಯವೂ ನರಕಯಾತನೆ
- ತರಕಾರಿ ತುಂಬಿದ ಲಾರಿ ಪಲ್ಟಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಘಟನೆ
- gold rate/ ಚಿನ್ನ, ಬೆಳ್ಳಿ ದರ ದಸರಾ ವೇಳೆ ಇಳಿಕೆ ಸಾಧ್ಯತೆ
ಇದು ಮೋದಿಯ ಸೋಲು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿಗೆ ಆದ ಸೋಲು ಎಂದು ಪ್ರತಿ ಪಕ್ಷಗಳು ಹೇಳುವಂತಾಗಿದೆ. ದೇವರ ಹೆಸರಲ್ಲಿ , ಮಂದಿರ ಹೆಸರಲ್ಲಿ ರಾಜಕೀಯ ಮಾಡುವುದಕ್ಕೆ ಮತದಾರರು ಆಯೋಧ್ಯೆ ಮೂಲಕ ಪಾಠ ಕಲಿಸಿದ್ದಾರೆಂಬ ಮಾತು ಕೇಳಿ ಬರುತ್ತಿದೆ.ಉತ್ತರ ಪ್ರದೇಶದ ಮತದಾರರು ಈ ಸಲ ಬಿಜೆಪಿಗೆ ಪ್ರಬಲ ಸಂದೇಶ ರವಾನಿಸಿದ್ದು, ಮೋದಿ, ಅಮಿತ್ ಶಾ, ನಡ್ಡಾ, ಯೋಗಿ ಕೂಟಕ್ಕೆ ಪ್ರಬಲ ಎಚ್ಚರಿಕೆ ನೀಡಿದಂತಾಗಿದೆ.