suddibindu.in
ಕುಮಟಾ : ಕಂಟೇನರ್ ವಾಹನದಲ್ಲಿ ಹಿಂಸಾತ್ಮಕವಾಗಿ ಅಕ್ರಮವಾಗಿ ಜಾನುವಾರುಗನ್ನ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಕುಮಟಾ ಪೊಲೀಸರು 23 ಜಾನುವಾರುಗಳನ್ನ ರಕ್ಷಣೆ ಮಾಡಿ ಆರು ಮಂದಿಯನ್ನ ವಶಕ್ಕೆ ಪಡೆದುಕೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣ ಮಾಸ್ತಕಟ್ಟಾ ಸರ್ಕಲ್ ಬಳಿ ನಡೆದಿದೆ
ಬೆಳಗಾವಿ ಜಿಲ್ಲೆಯ ಕಿತ್ತೂರಿಂದ ಭಟ್ಕಳಕ್ಕೆ ಅಕ್ರಮವಾಗಿ ಕಂಟೇನರ್ ವಾಹನದಲ್ಲಿ ಹಿಂಸಾತ್ಮಕವಾಗಿ 23 ಜಾನುವಾರುಗಳನ್ನ ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ತಿಳಿದ ಕುಮಟಾ ಪೊಲೀಸರ ತಂಡ ದಾಳಿ ನಡೆಸಿ ಜಾನುವಾರುಗಳನ್ನ ರಕ್ಷಣೆ ಮಾಡಿ ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ
- Murder/200ರೂ ಕೂಲಿ ಹಣಕ್ಕೆ ಬೀದಿಯಲ್ಲಿ ಬಿತ್ತು ಹೆಣ : ಉತ್ತರ ಕನ್ನಡದಲ್ಲಿ ಭೀಕರ ಘಟನೆ
- ಕಡಲತೀರದಲ್ಲಿ ಜಿಂಕೆಯ ಮೃತದೇಹ ಪತ್ತೆ
- ಹಟ್ಟಿಕೇರಿಯಲ್ಲಿ ಗ್ರಾಮೀಣ ಕ್ರೀಡೆಗೆ ಜೀವ ತುಂಬಿದ ಕೇಸರುಗದ್ದೆ ಕ್ರೀಡಾಕೂಟ
ಕಂಟೇನರ್ ವಾಹನದ ಚಾಲಕ ಮಂಡ್ಯ ಜಿಲ್ಲೆಯ ಸಾದತ್ ನಗರದ ಸೈಯದ್ ಇಸ್ಮಾಯಿಲ್ಮ, ಹಾಸನ ಜಿಲ್ಲೆಯ ಹೊಳೆನರಸೀಪುರದ ಮಹಮ್ಮದ್ ಅತೀಕ್, ಇನ್ನೋರ್ವ ಚಾಲಕ ಇರ್ಪಾನ, ಹೊಳೆನರಸೀಪುರ, ಶಾಯ ಎನುರ್ ಎ,ಎಮ್.ಪಿ.ಎಮ್ ಜನರಲ್ ಸ್ಟೋರ್ ಮದೀನಾ ಕಾಲೋನಿ ಭಟ್ಕಳ, ಅವುಫ್ ಅಬುಅಹಮ್ಮದ್ ಭಟ್ಕಳ, ಮೋರಾ ಬಸೀದ್ ಭಟ್ಕಳ ಬಂಧಿತ ಆರೋಪಿಗಳಾಗಿದ್ದಾರೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.