suddibindu.in
ಅಂಕೋಲಾ : ಕಾರಿನಲ್ಲಿ ಬಂದ 6-7ಮಂದಿ ಯುವಕರ ತಂಡವೊಂದು ಯುವಕ ನೋರ್ವನನ್ನ ಅಪರಣ ಮಾಡಿಕೊಂಡು ಹೋಗಿ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸುತ್ತಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮದಲ್ಲಿ ನಡೆದಿದೆ.

ತೆಂಕಣಕೇರಿಯ ಹರ್ಷ ನಾಗೇಂದ್ರ ನಾಯ್ಕ (27) ಹಲ್ಲೆಗೊಳಗಾದ ಯುವಕನಾಗಿದ್ದಾನೆ. ಗಂಭಿರವಾಗಿದ್ದು, ಚಿಕಿತ್ಸೆಗೆ ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ..ಪಟ್ಟಣದ ಪಿ.ಎಂ. ಪ್ರೌಡ ಶಾಲೆಯ ಎದುರಿನಿಂದ ಹರ್ಷ ನಾಯ್ಕನನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋದ ಯುವಕ ತಂಡ ಹಟ್ಟಿಕೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಬದಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮಾರಕ ಅಸ್ತ್ರಗಳಿಂದ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಗ್ರಾಮಸ್ಥರ ಕಂಡ ಯುವಕರ ತಂಡ ಅಲ್ಲಿಂದ ಕಾಲ್ಕಿತ್ತು ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಇದನ್ನೂ ಓದಿ

ಮೀನು ಲಾರಿ ಚಾಲಕನಾಗಿರುವ ಹರ್ಷ ನಾಗೇಂದ್ರ ನಾಯ್ಕ ಅಂಕೋಲಾದಿಂದ ತನ್ನ ಮನೆ ತೆಂಕಣಕೇರಿಗೆ ಭೈಕ್‌ನಲ್ಲಿ ಹೋಗುತ್ತಿದ್ದಾಗ ಕಾರನಲ್ಲಿ ಬಂದ ಯುವಕರ ತಂಡ ಅಪಹರಿಸಿ ಕೊಂಡು ಹೋಗಿ ಹಲ್ಲೆ ಮಾಡಿರುವುದಾಗಿ. ಹಲ್ಲೆಗೆ ಒಳಗಾದ ಹರ್ಷ ತಂದೆ ನಾಗೇಂದ್ರ ನಾಯ್ಕ ಹಾಗೂ ತಾಯಿ ಜಯಶ್ರೀ ನಾಯ್ಕ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಎಎಸೈ ಚಂದ್ರಕಾಂತ ನಾಯ್ಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.