suddibindu.in
ಬೆಂಗಳೂರು : ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಎಸ್ಐಟಿ ತನಿಖೆ ಎದುರಿಸುತ್ತಿದ್ದರೆ. ಇತ್ತ ಪ್ರಜ್ವಲ್ ತಾಯಿ ಭವಾನಿ ರೇವಣ್ಣ ಅವರಿಗೆ ಕ್ಯಾನ್ಸರ್ ಕಾಯಿಲೆ ಇದೆ ಎನ್ನುವ ಮಾಹಿತಿ ಅವರ ಪರ ವಕೀಲರಾಗಿರುವ ಸಂದೇಶ ಔಟಾ ಅವರು ನ್ಯಾಯಾಲಯದ ಎದುರು ಭವಾನಿ ರೇವಣ್ಣ ಅವರಿಗೆ ಕ್ಯಾನ್ಸರ್ ಇದೆ ಎನ್ನುವ ಬಗ್ಗೆ ವಾದ ಮಂಡಿಸಿದ್ದಾರೆ
ಸದ್ಯ ಭವಾನಿ ರೇವಣ್ಣ ಅವರಿಗೆ ಕ್ಯಾನ್ಸರ್ ಖಾಯಿಲೆ ಇದೆ ಹೀಗಾಗಿ ಅವರಿಗೆ ಚಿಕಿತ್ಸೆ ನೀಡಬೇಕಾಗಿದೆ. ಒಂದುವೇಳೆ ಅವರಿಗೆ ಬಂಧನವಾದರೆ ಅವರ ಚಿಕಿತ್ಸೆಗೆ ಸಮಸ್ಯೆ ಉಂಟಾಗಲಿದೆ ಹೀಗಾಗಿ ಅವರಿಗೆ ಚಿಕಿತ್ಸೆ ನೀಡಬೇಕಾಗಿರುವುದು ತೀರಾ ಅವಶ್ಯಕವಾಗಿದೆ. ಹೀಗಾಗಿ ಅವರಿಗೆ ಮಹಿಳೆ ಅಪಹರಣ ಪ್ರಕರಣದಲ್ಲಿ ಜಾಮೀನು ನೀಡಬೇಕು ಎಂದು ಭವಾನಿ ರೇವಣ್ಣ ಪರ ವಕೀಲರಾಗಿರುವ ಸಂದೇಶ ಔಟಾ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ.
ಇದನ್ನೂ ಓದಿ
- ಬರ್ಗಿಯಲ್ಲಿ ತಪ್ಪಿದ್ದ ಮತ್ತೊಂದು ಬೆಂಕಿ ದುರಂತ
- ನಿವೃತ್ತ PWD ಅಧಿಕಾರಿ ಅಳ್ವೆಕೋಡಿಯ ಜೈಯಂತ ಪಟಗಾರ ವಿಧಿವಶ
- ದೀಪಾವಳಿ ಹಬ್ಬಕ್ಕೆ ಅಂದರ್ ಬಾಹರ್ ಆಟಕ್ಕೆ ಅನುಮತಿ ಕೊಡಿ..!
ಕ್ಯಾನ್ಸರ್ ದೀಘಕಾಲವಾದ ಕಾಯಿಲೆಯಾಗಿದೆ. ಅವರಿಗೆ ಚಿಕಿತ್ಸೆ ನೀಡಬೇಕಾಗಿರುವುದು ತೀರಾ ಅವಶ್ಯಕವಾಗಿದೆ. ಒಂದು ವೇಳೆ ಅವರಗೆ ಕ್ಯಾನ್ಸರ್ ಸಂಬಂಧಿಸಿ ಸರಿಯಾದ ಚಿಕಿತ್ಸೆ ದೊರೆಯದೆ ಹೋದರೆ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಜಾಮೀನು ನೀಡಬೇಕು ಎಂದು ಭವಾನಿ ಪರ ವಕೀಲರು ನ್ಗಾಯಾಲಯದ ಎದುರು ಈ ವಿಚಾರ ಪ್ರಸ್ತಾಪಿಸಿದ್ದಾರೆ.